ಬೈಂದೂರು:ತಾಲೂಕು ಆಡಳಿತ ಕಛೇರಿ ಬಂದೂರು ಇದರ ವತಿಯಿಂದ 77 ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಬೈಂದೂರು ತಾಲುಕು ಆಡಳಿತ ಸೌಧದಲ್ಲಿ ನಡೆಯಿತು.

ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ ದ್ವಜಾರೋಹಣ ನೆರವೇರಿಸಿ ಬಳಿಕ ಸಂವಿದಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ  ವಿವಿಧ ಸದೃಡ ಭಾರತದ ಸಂಕಲ್ಪವೇ ಗಣರಾಜ್ಯೋತ್ಸವ.ಸದೃಡ ಸಮಾಜದ ನಿರ್ಮಾಣದ ಜೊತೆಗೆ ಬಲಿಷ್ಠ ಭಾರತ ವಿಶ್ವಗುರುವಾಗುವಂತ ದಾಪುಗಾವಲಿಡುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ.ಈ ನೆಲದ ಸಂಸ್ಕೃತಿ ಪರಂಪರೆ,ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ ಲತಾ ಶೆಟ್ಟಿ,ಗಿರಿಜಾ ಮೊಗೇರ್,ಆಹಾರ ನಿರೀಕ್ಷಕ ವಿನಯ ಕುಮಾರ್,ಗ್ರಾಮ ಲೆಕ್ಕಾಧಿಕಾರಿಗಳು,ಶಿಕ್ಷಣ ಇಲಾಖೆಯ ಅಽಕಾರಿಗಳೂ,ಪೊಲೀಸ್ ಇಲಾಖೆಯ ಸಿಬಂದಿಗಳು ಹಾಗೂ ಕಂದಾಯ ಇಲಾಖೆಯ ಸಿಬಂದಿಗಳು ಉಪಸ್ಥಿತರಿದ್ದರು.

 

 

 

 

 

Leave a Reply

Your email address will not be published. Required fields are marked *

fifteen + twenty =