ಬೈಂದೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ, ಬೆಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಮತ್ತು ಬೈಂದೂರು ಉತ್ಸವ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಜೆ.ಎನ್.ಆರ್ ಸಭಾಂಗಣದ ಪಕ್ಕದ ಮೈದಾನದ ನೆಲ್ಯಾಡಿ ಬಯಲು ಮಂದಿರದಲ್ಲಿ ನಡೆಯಿತು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾಲದ ಬದಲಾವಣೆಗೆ ತಕ್ಕಂತೆ ಹೈನುಗಾರಿಕೆಯನ್ನು ಮುಂದುವರಿಸಿದರೆ ಲಾಭದಾಯಕವಾಗಿಸಲು ಸಾಧ್ಯವಾಗುತ್ತದೆ.ಬೈಂದೂರು ಉತ್ಸವ ಬೈಂದೂರು ಜನರ ಜೀವನ ಕಟ್ಟಿಕೊಡುವ ಉದ್ದೇಶ ಒಳಗೊಂಡಿದೆ.ಒಕ್ಕೂಟದ ಮೂಲಕ ಕರುಗಳ ಪ್ರದರ್ಶನ ಎರ್ಪಡಿಸಿರುವುದು ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ ಎಂದರು.

ದ.ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ ಮದ್ವರಾಜ್, ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್ ಕೋಟ್ಯಾನ್,ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರಾದ ಎಮ್.ಸುಧಾಕರ ಶೆಟ್ಟಿ, ಮಂಜಯ್ಯ ಶೆಟ್ಟಿ, ಕೆ.ಶಿವಮೂರ್ತಿ,ಮಮತಾ ಆರ್ .ಶೆಟ್ಟಿ,ಡಿ.ವಿವೇಕ್, ವ್ಯವಸ್ಥಾಪಕ ಡಾ.ರವಿರಾಜ ಉಡುಪ,ಸಮೃದ್ದ ಬೈಂದೂರು ಅಧ್ಯಕ್ಷ ಸುರೇಶ ಶೆಟ್ಟಿ ಉಪ್ಪುಂದ,ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಬೈಂದೂರು ಉತ್ಸವದ ಸಂಚಾಲಕ ಶ್ರೀಗಣೇಶ ಉಪ್ಪುಂದ,ಉಪ ವ್ಯವಸ್ಥಾಪಕ ಶಂಕರ ನಾಯ್ಕ, ವಿಸ್ತರಣಾಧಿಕಾರಿ ವಾಸುದೇವ,ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಜಾನುವಾರುಗಳಿಗೆ ಗೋಪೂಜಾ ನೆರವೇರಿತು. ನಂದಿನಿ ಉಪ ವ್ಯವಸ್ಥಾಪಕ ಚಂದ್ರಶೇಖರ ಭಟ್ ಜಾನುವಾರುಗಳನ್ನು ಸಾಕುವ ಬಗ್ಗೆ ಹೈನುಗಾರರಿಗೆ ಮಾಹಿತಿ ನೀಡಿದರು ಹಾಗೂ ಆಯ್ಕೆಯಾದ ಕರುಗಳಿಗೆ ಬಹುಮಾನ ವಿತರಿಸಲಾಯಿತು.

ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದ.ಕ ಸಹಕಾರಿ ಹಾಲು ಒಕ್ಕೂಟದ ಬೈಂದೂರು ತಾಲೂಕು ವಿಸ್ತರಣಾಧಿಕಾರಿ ರಾಜಾರಾಮ ಕಾರ್ಯಕ್ರಮ ನಿರೂಪಿಸಿದರು  ಮಂಜಯ್ಯ ಶೆಟ್ಟಿ ಸಬ್ಲಾಡಿ ವಂದಿಸಿದರು.

 

Leave a Reply

Your email address will not be published. Required fields are marked *

four + twenty =