ಬೈಂದೂರು: ಶ್ರೀ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಶೈಕ್ಷಣಿಕ,ಸಾಮಾಜಿಕ,ಸೇವಾ ಸಂಸ್ಥೆ ಇದರ ವತಿಯಿಂದ 18ನೇ ಮನೆ ಪ್ರವೇಶೋತ್ಸವ ಕಾರ್ಯಕ್ರಮ ಜ.26 ರಂದು ಪೂರ್ವಾಹ್ನ 10;30 ಕ್ಕೆ ಶಿರೂರು ಮೇಲ್ಪಂಕ್ತಿಯಲ್ಲಿ ನಡೆಯಲಿದೆ.
ಮಂಜಮ್ಮ ಮತ್ತು ಬಾಬು ಪೂಜಾರಿ ಚಮ್ಮನಹಿತ್ಲು ಬಿಜೂರು ನೂತನ ಶ್ರೀ ವರಲಕ್ಮೀ ನಿಲಯವನ್ನು ಉದ್ಘಾಟಿಸಲಿದ್ದಾರೆ. ಶ್ರೀ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಡಾ.ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಏಕಜಾತಿ ಧರ್ಮ ಪೀಠ ದ್ವಾರಕಮಾಯಿ ಮಠ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ ಗುರುಜೀ ಇವರು ದಿವ್ಯ ಆಶೀರ್ವಚನ ನೀಡಲಿದ್ದಾರೆ.ಉಡುಪಿ ಜಿಲ್ಲಾ ರಾಷ್ಟೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.