ಬೈಂದೂರು: ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಸೋಮವಾರ ಬೈಂದೂರು ಪಟ್ಟಣ ಪಂಚಾಯತ್‌ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು. ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನರನ್ನು ಮೂರ್ಖರನ್ನಾಗಿಸಿದೆ.ಪ್ರತಿ ಕ್ಷೇತ್ರದಲ್ಲೂ ಬೆಲೆ ಏರಿಕೆ ಮೂಲಕ ಜನರನ್ನು ಶೋಷಣೆ ಮಾಡುತ್ತಿದೆ.ವಿದ್ಯುತ್ ದರ ಅಧಿಕಗೊಂಡಿದೆ.ಗೃಹಲಕ್ಷ್ಮಿ ಯೋಜನೆ ಹೆಸರಿಗೆ ಮಾತ್ರ ಸೀಮಿತವಾಗಿದೆ.ನೊಂದಣಿ ಶುಲ್ಕ ಮೂರು ಪಟ್ಟು ಹೆಚ್ಚಿದೆ.ಒಂದು ವರ್ಷದಿಂದ ಭೂಪರಿವರ್ತನೆಯಾಗುತ್ತಿಲ್ಲ.ನಿಧಿ೯ಷ್ಟ ಕಾರಣ ಇಲ್ಲದೆ ಆಕ್ರಮ -ಸಕ್ರಮ ಅರ್ಜಿಗಳು ತಿರಸ್ಕ್ರತಗೊಳ್ಳುತ್ತಿದೆ.ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷದ ಆಡಳಿತ ಜನಸಾಮಾನ್ಯರನ್ನು ಹೈರಾಣಾಗಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ,ಬಿಜೆಪಿ ಮುಖಂಡರಾದ ಗೋಪಾಲ್ ಪೂಜಾರಿ ವಸ್ರೆ,ಪ್ರಸಾದ್ ಬೈಂದೂರು, ವಿಠ್ಠಲ್ ಶೆಟ್ಟಿ,ರಾಜಶೇಖರ ದೇವಾಡಿಗ,ಭಾಗೀರಥಿ,ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.