ಬೈಂದೂರು: ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ,ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ,ರೋಟರಿ ಕ್ಲಬ್ ಬೈಂದೂರು,ರಕ್ತನಿಧಿ ಕೆ.ಎಂ.ಸಿ ಮಣಿಪಾಲ,ಜಿಲ್ಲಾಡಳಿತ ಉಡುಪಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ರೋಟರಿ ಸಮುದಾಯ ಭವನ ಬೈಂದೂರಿನಲ್ಲಿ ನಡೆಯಿತು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಈ ಜಗತ್ತಿನಲ್ಲಿ ಹುಟ್ಟಿಕೊಂಡಿಲ್ಲ. ಈ ದಿಸೆಯಲ್ಲಿ ಪ್ರತಿಯೊಬ್ಬರು ಅದರ ಮಹತ್ವ ಅರಿತು ರಕ್ತದಾನಕ್ಕೆ ಮುಂದಾಗಬೇಕು.ಒಂದು ಯುನಿಟ್ ರಕ್ತದಿಂದ ನಾಲ್ಕು ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮೊಗವೀರ ಯುವ ಸಂಘಟನೆ ಜಿಲ್ಲೆಯಲ್ಲೆ ರಕ್ತದಾನಗೈದು ಹೊಸ ಭಾಷ್ಯ ಬರೆದಿದೆ.ಸಾಮಾಜಿಕ ಬದ್ಧತೆ ಪ್ರದರ್ಶಿಸುವುದರೊಂದಿಗೆ ಸಮುದಾಯದ ಏಳಿಗೆಗೆ ಮೊಗವೀರ ಯುವ ಸಂಘ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ರಕ್ತದಾನ ಒಂದು ಪವಿತ್ರವಾದ ದಾನವಾಗಿದೆ. ತುರ್ತು ಸಂದರ್ಭದಲ್ಲಿ ರಕ್ತ ಅಮೂಲ್ಯ ಪಾತ್ರ ವಹಿಸುತ್ತದೆ.ರಕ್ತದ ಮಹತ್ವ ಅರಿತು ರಕ್ತದಾನ ಮಾಡಿದಲ್ಲಿ ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯವಿದೆ ಎಂದರು.
ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಮ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗೌರವ ಸಲಹೆಗಾರ ರಾಮ ಎಚ್.ಕಳವಾಡಿ,ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ನಿಕಟಪೂರ್ವಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ,ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ,ಕೆನರಾ ಬ್ಯಾಂಕ್ ಉದ್ಯೋಗಿ ಸುನೀಲ್ ಎಸ್.ಮೊಗವೀರ,ಡಾ.ಶಂಕರ ಶೆಟ್ಟಿ,ಕೆ.ಎಸ್.ಆರ್.ಟಿ.ಸಿ ಲೆಕ್ಕಪತ್ರ ಮೇಲ್ವಿಚಾರಕ ಯೋಗಿಶ್ ಕಂಬದಕೋಣೆ,ಉದ್ಯಮಿ ನಿತಿನ್ ಬಂಕೇಶ್ವರ,ಡಾ.ಪ್ರಕೃತಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಚಂದ್ರಶೇಖರ ಸೂರ್ಕುಂದ ಸ್ವಾಗತಿಸಿದರು.ಉಪನ್ಯಾಸಕ ಪಾಂಡುರಂಗ ಮೊಗವೀರ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿದರು.ಪ್ರಭಾಕರ ಕಸ್ಟಮ್ ವಂದಿಸಿದರು.
ವರದಿ/ಗಿರಿ ಶಿರೂರು