ಶಿರೂರು: ಬೈಂದೂರು ಭಾಗದ ಕಡಲ ತಡಿಯಲ್ಲಿ ಮೀನುಗಾರಿಕೆಯ ಕಲರವ ಆರಂಭಗೊಂಡಿದೆ.ಕಳೆದೊಂದು ವಾರದಿಂದ ಮಳೆಗಾಲ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದ್ದು ಉಪ್ಪುಂದ,ಶಿರೂರು,ಕಳಿಹಿತ್ಲು,ಅಳ್ವೆಗದ್ದೆ,ಕೊಡೇರಿ,ನಾಗೂರು ಮುಂತಾದ ಕಡೆಗಳಲ್ಲಿ ಕಡಲಬ್ಬರಕ್ಕೆ ನಾಡದೋಣಿಗಳು ಎದೆಯೊಡ್ಡಿ ಮತ್ಸ್ಯ ಬೇಟಿ ನಡೆಸುತ್ತಿದೆ.

ಕಳಿಹಿತ್ಲು ಬಂದರಿನಲ್ಲಿ ಉತ್ತಮ ಮತ್ಸ್ಯ ಬೇಟಿ: ಮಳೆಗಾಲ ಮುಗಿಯುತ್ತಿದ್ದಂತೆ ಬಂದೂರಿನ ಭಾಗದ ಬಹುತೇಕ ಮೀನುಗಾರಿಕಾ ದೋಣಿಗಳು ಶಿರೂರಿನ ಕಳಿಹಿತ್ಲು ಬಂದರಿನಲ್ಲಿ ಮೀನುಗಾರಿಕೆ ನಡೆಸುತ್ತಿದೆ.ಭಾನುವಾರ ಹಾಗೂ ಸೋಮವಾರ ಈ ಬಂದರಿನಲ್ಲಿ ಉತ್ತಮ ಮೀನುಗಾರಿಕೆ ಆಗಿದ್ದು ಭರ್ಜರಿ ಮೀನಿನ ಬೇಟಿ ದೊರೆತಿದೆ.ಕಳೆದ ವರ್ಷ ಕಳಿಹಿತ್ಲು ಭಾಗಕ್ಕೆ ಸಂಚರಿಸಲು ರಸ್ತೆ ಸಮಸ್ಯೆ ಇದ್ದು ಈ ವರ್ಷ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದು ಮೀನುಗಾರರಿಗೆ ಅನುಕೂಲವಾಗಿದೆ.ಒಟ್ಟಾರೆಯಾಗಿ ಶಿರೂರು ಭಾಗದಲ್ಲಿ ನಾಡದೋಣಿಗಳು ಆರಂಭದಲ್ಲೆ ಉತ್ತಮ ಮೀನುಗಾರಿಕೆಯಾಗುವ ಮೂಲಕ ಹೊಸ ಹುರುಪು ನೀಡಿದೆ.

Pic: Manju Omkar

 

 

Leave a Reply

Your email address will not be published. Required fields are marked *

two × 3 =