ಬೈಂದೂರು: ಶ್ರೀಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಇದರ 354ನೇ ಆರಾಧನ ಮಹೋತ್ಸವ ಸೋಮವಾರ ನಡೆಯಿತು.ಬೆಳಿಗ್ಗೆ ಪಾದಪೂಜೆ,ಅರ್ಚನೆ,ಆಂಜನೇಯ ಸ್ವಾಮಿಗೆ ಬೆಣ್ಣೆ ಸೇವೆ,ಮಹಾಪೂಜೆ,ಮಹಾಮಂಗಳಾರತಿ,ಪ್ರಸಾದ ವಿತರಣೆ ,ಮದ್ಯಾಹ್ನ ಮಹಾಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಸಾವಿರಾರು ಭಕ್ತರು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗುರು ಸಾರ್ವಭೌಮರ ಆರಾಧನ ಮಹೋತ್ಸವದ ಪ್ರಯುಕ್ತ ಸೇವಾ ಸಂಗಮ ಶಿಶು ಮಂದಿರ ಬೈಂದೂರು ಇಲ್ಲಿನ ಮಾತೆಯರಿಂದ ಭಗವದ್ಗೀತೆ ಪಠಣ,ವಿಷ್ಣು ಸಹಸ್ರನಾಮ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅರ್ಚಕರು ಹಾಗೂ ದೇವಸ್ಥಾನದ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
News/pic: Giri Shiruru