ಶಿರೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಹೊಂದಿದೆ.ಹತ್ತಾರು ನಿಯಮಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರನ್ನು ಗೋಳಿಗೆ ಒಳಪಡಿಸಿದೆ.ಅನುದಾನ ನೀಡದೆ ಅಭಿವೃದ್ದಿ ಶೂನ್ಯವಾಗಿದೆ.ಹಲವಾರು ಯೋಜನೆಗಳು ಅನುದಾನ ಇಲ್ಲದೆ ತಟಸ್ಥಗೊಂಡಿದೆ ಎಂದು ಬಿಜೆಪಿ ಪ್ರಮುಖರಾದ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಸೋಮವಾರ ಶಿರೂರು ಗ್ರಾಮ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ ನಡೆಸಿ ಈ ಮಾತುಗಳನ್ನಾಡಿದರು.
ಉಡುಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮಾತನಾಡಿ ರಾಜ್ಯ ಸರಕಾರ ಗ್ರಾಮ ಮಟ್ಟದಲ್ಲಿ ಆಗುವ ಯೋಜನೆಗಳನ್ನು ಪ್ರಾಧಿಕಾರಕ್ಕೆ ಅಲೆದಾಡುವಂತೆ ಮಾಡಿದೆ.ಮಹಿಳೆಯರಿಗೆ ಉಚಿತ ಬಸ್ ಎಂದು ಪುರುಷರಿಗೆ ಟಿಕೇಟ್ ಜಾಸ್ತಿ ಮಾಡಿದೆ.ಅಲ್ಪಸಂಖ್ಯಾತರ ಓಲೈಕೆಗಾಗಿ ಮಾತ್ರ ರಾಜ್ಯದ ಕಾಂಗ್ರೆಸ್ ಸರಕಾರ ಸೀಮಿತವಾಗಿದ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಆರ್‍ಮಕ್ಕಿ, ಬಾಬು ಮೊಗೇರ್ ಅಳ್ವೆಗದ್ದೆ,ಶಂಕರ ಡಿ.ಮೇಸ್ತ,ಸಂದ್ಯಾ,ಕಾವೇರಿ,ಗೀತಾ ಮೇಸ್ತ,ಬಿಜೆಪಿ ಪಕ್ಷದ ಅಣ್ಣಪ್ಪ ವಿ.ಮೇಸ್ತ,ಕಾರ್ತಿಕ ಮೇಸ್ತ,ದತ್ತಾತ್ರೇಯ ಮೊಗೇರ್,ನಾಗರಾಜ ಪ್ರಭು,ದಿನೇಶ ಬಪ್ಪನಬೈಲು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ವರದಿ/ಚಿತ್ರ :ಗಿರಿ ಶಿರೂರು