ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ದೊಂಬೆ ಪುಂಡನಮನೆ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದ ಬಳಿ ಗುಡ್ಡ ಕುಸಿದ ಸ್ಥಳಕ್ಕೆ ಶುಕ್ರವಾರ ವಿವಿಧ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಭಾಗದಲ್ಲಿ ಗುಡ್ಡ ಕುಸಿದಿರುವ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿತ್ತು.ವರದಿಗೆ ಸ್ಪಂಧಿಸಿ ಬೇಟಿ ನೀಡಿದ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವ ಜೊತೆಗೆ ಈಗಾಗಲೇ ರಸ್ತೆಗೆ ಬಾಗಿಕೊಂಡ ಮರಗಳನ್ನು ಕಡಿಯಲಾಗಿದ್ದು.ಮುಂದೆ ಗುಡ್ಡ ಕುಸಿತ ಉಂಟಾದಲ್ಲಿ ಹಿಟಾಚಿ ಮೂಲಕ ಗುಡ್ಡದ ಮಣ್ಣನ್ನು ತೆರವುಗೊಳಿಸಲಾಗುವುದು.ಸಂಚಾರದ ಸುರಕ್ಷತೆಗಾಗಿ ಗುಡ್ಡದ ಕುಸಿತದ ಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು  ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.ಕಳೆದ ವರ್ಷ ಸೋಮೇಶ್ವರ ಗುಡ್ಡ ಕುಸಿದು ಬಹಳಷ್ಟು ಸಮಸ್ಯೆ ಆಗಿದ್ದು ಈ ವರ್ಷ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸ್ಥಳಕ್ಕೆ ಬೈಂದೂರು ತಹಶೀಲ್ದಾರ ಭೀಮಸೇನ ಕುಲಕರ್ಣಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್,ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್,ಬೈಂದೂರು ಮೆಸ್ಕಾಂ ಇಲಾಖೆಯ ಉಪವಿಭಾಗಾಧಿಕಾರಿ ಹರೀಶ್,ಕರಾವಳಿ ಕಾವಲು ಪಡೆಯ ಪಿ.ಎಸ್.ಐ  ಸುಬ್ರಹ್ಮಣ್ಯ,ಉಪವಲಯ ಅರಣ್ಯಾಧಿಕಾರಿ ಹರ್ಷ ವಿ,ಮಾಜಿ ಗ್ರಾ.ಪಂ ಸದಸ್ಯ ಸಂಜೀವ ಮೊಗವೀರ,ಅರಣ್ಯ ವೀಕ್ಷಕ ಶಂಕರ,ಅರಣ್ಯ ಇಲಾಖೆಯ ಸಿಬಂದಿಗಳು,ಪಟ್ಟಣ ಪಂಚಾಯತ್ ಸಿಬಂದಿಗಳು,ಕರಾವಳಿ ಕಾವಲು ಪಡೆಯ ಸಿಬಂದಿಗಳು ಹಾಗೂ ಮೆಸ್ಕಾಂ ಇಲಾಖೆಯ ಸಿಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

13 − five =

You missed