ಬೈಂದೂರು: ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಗೆ ಶಿರೂರಿನಲ್ಲಿ ಮೀನು ಸಾಕಣೆ ಘಟಕ ನದಿಪಾಲಾಗಿ ಮೂರು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.ಸಮುದ್ರ ಮಟ್ಟದಲ್ಲಿ ಇರುವ ತಗ್ಗು ಪ್ರದೇಶವಾದ ಕಳಿಹಿತ್ಲುವಿನಲ್ಲಿ ಅಪಾರ ಹಾನಿವುಂಟಾಗಿ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಕಳಿಹಿತ್ಲುವಿನಲ್ಲಿ ಹಾದು ಹೋಗುವ ಕುಂಬಾರ ನದಿಯು ಅಬ್ಬರಕ್ಕೆ ಅನೇಕ ದೋಣಿಗಳು ಹಾನಿಗೊಂಡಿದೆ.ಈ ನದಿಯಲ್ಲಿ ಮೀನು ಸಾಕಾಣಿಕೆಗೆ ಅಳವಡಿಸಿದ ಮೀನುಗೂಡು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ದೆ.ಅದರಲ್ಲಿ ಸಾಕಲು ಇಟ್ಟಿರುವ ಎರಡು ಸಾವಿರ ಮೀನುಗಳು ನದಿಯ ಪಾಲಾದವು. ನದಿಯ ನೀರಿನ ಹರಿವು ತೀವ್ರ ಇರುವುದರಿಂದ ನದಿಯ ದಡದಲ್ಲಿರುವ ಮನೆಗಳು ಅಪಾಯದ ಅಂಚಿಗೆ ನಿಲುಕಿದೆ.
ಈ ಸಂಧರ್ಭದಲ್ಲಿ ಶಿರೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಕಾಪ್ಸಿ ನೂರ್ ಮುಹಮ್ಮದ್ ರವರು ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದಾರೆ.