ಬೈಂದೂರು; ಕಳೆದ ಹಲವು ದಿನಗಳಿಂದ ಮಳೆಯಿಂದಾಗಿ  ಪಡುವರಿ ಗ್ರಾಮದ ದೊಂಬೆ ಚೋಣುಮನೆ ಎಂಬಲ್ಲಿ ಕಡಲ್ಕೊರೆತ ಉಂಟಾಗುತ್ತಿದ್ದು ಸ್ಥಳಕ್ಕೆ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದ ಬಾರಿ ಜಿಲ್ಲಾಧಿಕಾರಿಗಳು ಈ ಭಾಗಕ್ಕೆ ಬೇಟಿ ನೀಡಿದ್ದರು ಸಹ ಈವರೆಗೆ ಯಾವುದೇ ಶಾಶ್ವತ ಪರಿಹಾರವಾಗಿಲ್ಲ.ಗುಡ್ಡದ ಮೇಲ್ಬಾಗದಿಂದ ನೀರು ರಭಸವಾಗಿ ಹರಿಯುತ್ತಿರುವ  ಪರಿಣಾಮ ಪ್ರತಿ ವರ್ಷ ಈ ಭಾಗದಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ.ಈ ಭಾಗದಲ್ಲಿ 30ಕ್ಕೂ ಅಧಿಕ ಮೀನುಗಾರರ ಮನೆಗಳಿದ್ದು ಅಪಾಯದ ಅಂಚಿನಲ್ಲಿದೆ.ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಮುಂಜಾಗೃತ  ಕ್ರಮಕೈಗೊಳ್ಳಬೇಕಿದೆ.

ಈ ಸಂದರ್ಭದಲ್ಲಿ ಪಡುವರಿ ಗ್ರಾ.ಪಂ ಮಾಜಿ ಸದಸ್ಯ ಸಂಜೀವ ಮೊಗವೀರ,ನಾಡದೋಣಿ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *

16 − three =

You missed