ಬೈಂದೂರು: ತಾಲೂಕಿನ ವಿವಿಧ ಕಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿಗಳು ನಷ್ಟವಾಗಿದೆ.
ಬೈಂದೂರು ಭಾಗದಲ್ಲಿ 7 ಮೀ.ಮೀಗೂ ಹೆಚ್ಚಿನ ಮಳೆ ಸಂಜೆ ವೇಳೆಗೆ ಸುರಿದಿದೆ. ಭಾರಿ ಮಳೆಗೆ ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು ಹೊಸತಾಗಿ ನಿರ್ಮಿಸಲಾಗಿದ್ದ ರೂ.15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಊಟದ ಹಾಲ್ ಮೇಲ್ಟಾವಣಿ ಕುಸಿದು ಬಿದ್ದಿದೆ. ಬೈಂದೂರು ಪೊಲೀಸ್ ಠಾಣೆ ಆವರಣದಲ್ಲಿ ಹಳೆ ವೃತ್ತ ನಿರೀಕ್ಷಕರ ಕಛೇರಿ ಮೇಲೆ ಮರ ಉರುಳಿ ಬಿದ್ದಿದೆ. ಬೈಂದೂರು ರಥಬೀದಿಯ ನವೀನ್ ವೈನ್ಸ್ ಹಿಂಭಾಗದ ಮನೆಯ ಶೌಚಗೃಹದ ಮೇಲ್ಪಾವಣಿ ಹಾರಿ ಹೋಗಿದೆ. ಮನೆ ಮಾಡು ಕುಸಿತ, ಮರ ಉರುಳಿ ಬಿದ್ದಿರುವುದು, ರಸ್ತೆ ಮೇಲೆ ವಿದ್ಯುತ್ ಕಂಬ ಉರುಳಿದೆ. ಬೈಂದೂರು ಮೆಸ್ಕಾಂ ಕಛೇರಿ ಬಳಿ ಮರಬಿದ್ದು ಅಪಾರ ಹಾನಿ ಉಂಟಾಗಿದೆ.ಬಹುತೇಕ ಬೈಂದೂರು ಕತ್ತಲಾವರಿಸಿದೆ.
ದೊಂಬೆ ಪರಿಸರದಲ್ಲಿ 12 ವಿದ್ಯುತ್ ಕಂಬ,ಇಪ್ಪತ್ತಕ್ಕೂ ಅಧಿಕ ತೆಂಗಿನ ಮರ ಉರುಳಿದೆ.ಸಂಜೆ ವೇಳೆ ಗಾಳಿ ಮಳೆ ಅಬ್ಬರ ಕಡಿಮೆಯಾಗಿದೆ.ಮೆಸ್ಕಾಂ,ಕಂದಾಯ ಇಲಾಖೆ ದುರಸ್ತಿ ಕಾರ್ಯದಲ್ಲಿ ತೊಡಗಿದೆ