ಶಿರೂರು: ಕಡು ಬಡತನದಲ್ಲಿ ಬೆಳೆದು ಪರಿಶ್ರಮದ ಮೂಲಕ ಸಾಧನೆಗೈದು ದೇಶದ ಗಡಿಭದ್ರತಾ ಪಡೆಗೆ ಆಯ್ಕೆಯಾದ ಕುಮಾರಿ ದೀಕ್ಷಾ ಇವರನ್ನು ಶಿರೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಶಿರೂರು ಸಮೀಪದ ಊದೂರಿನ ಕುಮಾರಿ ದೀಕ್ಷಾ ಬಿ ಎಸ್ ಎಫ್ ಹುದ್ದೆಗೆ ಆಯ್ಕೆಯಾಗಿ ಪಶ್ಚಿಮ ಬಂಗಾಲದಲ್ಲಿ ತರಬೇತಿ ಮುಗಿಸಿ ಹುಟ್ಟೂರಿಗೆ ಆಗಮಿಸಿದಾಗ ರಾಷ್ಟ್ರಭಕ್ತ ಯುವ ವೇದಿಕೆ ಊದೂರು ಹಾಗೂ ವಿವಿಧ ಸಂಘ ಸಂಸ್ಥೆ ಸಹಕಾರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಬಳಿಕ ಮಾನಸ ಮಿತ್ರಮಂಡಳಿ ವತಿಯಿಂದ ಹುಟ್ಟೂರ ಸಮ್ಮಾನ ನೀಡಲಾಯಿತು.
ಈ ಸಂಧರ್ಭದಲ್ಲಿ ಉದಯ ಮಾಕೋಡಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಮಹಾದೇವ ಗೊಂಡ ಕಡ್ಕೆ,ಅನೀಶ ಕುಮಾರ್,ಜನಾರ್ಧನ ಪ್ರಭು,ವಿನಾಯಕ ಊದೂರು ಮೊದಲಾದವರು ಹಾಜರಿದ್ದರು.
pic: Maddy Byndoor