ಬೈಂದೂರು: ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ.) ಉಪ್ಪುಂದ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಉಪ್ಪುಂದ ಪರಿಚಯ ದೇವಕಿ ಜಿ. ಆರ್ ಸಭಾಂಗಣದಲ್ಲಿ ನಡೆಯಿತು
ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ.) ಉಪ್ಪುಂದ ಇದರ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 83.19 ಲಕ್ಷ ವ್ಯವಹಾರ ನಡೆಸಿದ್ದು 26.74 ಲಕ್ಷ ಲಾಭಗಳಿಸಿದ್ದು ಸಂಘದ ಸದಸ್ಯರಿಗೆ ಶೇ.10.05% ಡಿವಿಡೆಂಡ್ ಘೋಷಣೆ ಮಾಡಲಾಗಿದೆ.ಜನರಿಗೆ ಉತ್ತಮ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ನಿಟ್ಟಿನಲ್ಲಿ ಆರಂಭಿಸಿದ ಸಂಸ್ಥೆಗೆ ಜನರ ಉತ್ತಮ ಸಹಕಾರದಿಂದಾಗಿ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ಸಾಧಿಸಿದೆ. ಇದಕ್ಕೆ ಸಿಬಂದಿಗಳ ಪರಿಶ್ರಮ ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸುವುದು ಹಾಗೂ ಶಾಖೆಗಳು ಸ್ವಂತ ಕಟ್ಟಡವನ್ನು ಹೊಂದುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ವೇದಿಕೆಯಲ್ಲಿ ನಿರ್ದೇಶಕರಾದ ರಾಘವೇಂದ್ರ ಪೂಜಾರಿ ನಾರಂಬಳ್ಳಿ, ದೇವನ್ ಕೆ.ಪೂಜಾರಿ, ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ,ಮಾಚಯ್ಯ ಬಿಲ್ಲವ,ಗಿರೀಶ್ ಹೊಳ್ಳ, ರಾಮ ಗಾಣಿಗ, ಗೋವಿಂದ ಎನ್.ಪೂಜಾರಿ, ಲಾರೆನ್ಸ್ ಫೆರ್ನಾಂಡೀಸ್,ಮೂಕಾಂಬು ಪೂಜಾರಿ, ಮಂಜುನಾಥ ರಾಮ ನಾಯ್ಕ್, ಪದ್ಮಾ ಎಚ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ತರಗತಿಯ ಸದಸ್ಯರ ಮಕ್ಕಳಿಗೆ ಎಸ್. ಎಸ್. ಎಲ್. ಸಿ. ಹಾಗೂ ದ್ವಿತೀಯ ಪಿಯುಸಿ ಯಲ್ಲಿ 95% ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಉಪ್ಪುಂದ ಉಪಾಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು ಸ್ವಾಗತಿಸಿದರು. ಶಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಆರ್.ಪೂಜಾರಿ ವಾರ್ಷಿಕ ಲೆಕ್ಕ ಪತ್ರಮಂಡಿಸಿದರು. ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ್ ಯಡ್ತರೆ ಕಾರ್ಯಕ್ರಮ ನಿರೂಪಿಸಿದರು. ತ್ರಾಸಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಆಚಾರ್ ತಗ್ಗರ್ಸೆ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು