ಶಿರೂರು;ಸಾರ್ವಜನಿಕರ ಸಹಕಾರವಿದ್ದಾಗ ಪ್ರತಿ ಅಧಿಕಾರಿಗಳಿಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.ಕಾನೂನು ಪಾಲಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ.ಸಮಾಜಬಾಹಿರ ಕೃತ್ಯಗಳಿಂದ ದೂರ ಉಳಿದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ.ಇಲಾಖೆಯ ಕಾರ್ಯವನ್ನು ಗುರುತಿಸುವುದು ನಮ್ಮ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.ಕರಾವಳಿಯ ಯುವಶಕ್ತಿ ಗಣೇಶೋತ್ಸವ ಸಮಿತಿ ಅತ್ಯುತ್ತಮ ಕಾರ್ಯಕ್ರಮಗಳ ಮುಖಾಂತರ ಗುರುತಿಸಿಕೊಂಡಿರುವುದು ಇಲ್ಲಿನ ಯುವಕರ ಸಾಂಘಿಕ ಪ್ರಯತ್ನದ ಫಲವಾಗಿದೆ ಎಂದು ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಹೇಳಿದರು ಅವರು ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 24ನೇ ವರ್ಷದ ಗಣೇಶೋತ್ಸವ ಸಮಾರಂಭದ 2ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಈ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಧಾರವಾಡ ವಿಶ್ವವಿದ್ಯಾನಿಲಯ ಅನಾಲಿಸಸ್ ಆಫ್ ಕ್ರೆಡಿಟ್ ಆಪರೇಷನ್ ಇನ್ ಕಮರ್ಶಿಯಲ್ ಬ್ಯಾಂಕ್ಸ್ ಎನ್ನುವ ವಿಷಯ ಕುರಿತು ಪ್ರಬಂಧ ಮಂಡನೆಗೆ ಡಾಕ್ಟರೇಟ್ ಪದವಿ ಪಡೆದ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಲತಾ ಪೂಜಾರಿ,ಉದ್ಯಮಿ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಹಾಗೂ ಶಿರೂರಿನ ವೈದ್ಯರಾದ ಡಾ.ವೆಂಕಟೇಶ ಯು ರವರನ್ನು ಸಮ್ಮಾನಿಸಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುವಶಕ್ತಿ ಕೊಡಮಾಡುವ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠ್ಠಲ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್,ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ ಶಿರೂರು,ನಿವೃತ್ತ ಅಪೆಕ್ಸ್ ಬ್ಯಾಂಕ್‌ನ ಮಾಚ ಬಿಲ್ಲವ,ನಾಯ್ಕನಕಟ್ಟೆ ಶಾಲಾ ಮುಖ್ಯ ಶಿಕ್ಷಕ ಮಹಾದೇವ ಬಿಲ್ಲವ,ಆಲಂದೂರು ಶಾಲೆಯ ಮುಖ್ಯ ಶಿಕ್ಷಕ ಮಾಧವ ಬಿಲ್ಲವ,ರಾಮ ಟೈಲರ್,ಚೆನ್ನಪ್ಪಯ್ಯನತೊಪ್ಪಲು ನಾಗಬನ ಸಮಿತಿ ಮಾಜಿ ಅಧ್ಯಕ್ಷ ಮಹಾದೇವ ಶೆಟ್ರಹಿತ್ಲು,ಯುವಶಕ್ತಿ ಗೌರವಾಧ್ಯಕ್ಷ ಅಣ್ಣಪ್ಪ ಮೊಗೇರ್,ಮಾಜಿ ಅಧ್ಯಕ್ಷರಾದ ವಾಸು ಬಿಲ್ಲವ ತೆಂಕಮನೆ,ಮಂಗಳು ಬಿಲ್ಲವ,ತಿಮ್ಮಪ್ಪ ಬಿಲ್ಲವ ಚಂಬಿತ್ಲು,ರಮೇಶ್ ಮೊಗೇರ್ ,ರವಿದಾಸ್ ಮೊಗೇರ್,ಉಮೇಶ ಮೊಗೇರ್,ಶಿವಯ್ಯ ಬಿಲ್ಲವ ಹಾಗೂ ಯುವಶಕ್ತಿ ಸದಸ್ಯರು ಉಪಸ್ಥಿತರಿದ್ದರು.
ಮಹೇಂದ್ರ ಬಿಲ್ಲವ ಸ್ವಾಗತಿಸಿದರು.ಅರುಣ ಕುಮಾರ್ ಹಾಗೂ ಮಹೇಶ ಮೊಗೇರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಯನ್ ಕುಮಾರ್ ವಂದಿಸಿದರು.
ವರದಿ/ಚಿತ್ರ: ಗಿರೀಶ್ ಶಿರೂರು