ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯಾಡಿ ಇಲ್ಲಿನ ವಿದ್ಯಾರ್ಥಿ ಪ್ರಜ್ವಲ್ ಮಹಾದೇವ ಪೂಜಾರಿ ಕಿಸ್ಮತ್ತಿ ಇವರು ವಿಜ್ಞಾನ ಮಾದರಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ಪ್ರಸ್ತುತ ದೆಹಲಿಯಲ್ಲಿ ನಡೆಯಲಿರುವ ಇನ್‌ಸ್ಪೈರ್ ಅವಾರ್ಡ್ (ವಿಜ್ಞಾನ ಮಾದರಿ)ಪ್ರಾಜೆಕ್ಟ್ ತಯಾರಿಕೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈತ ಯಡ್ತರೆ ಗ್ರಾಮದ ಕಿಸ್ಮತ್ತಿ ನಿವಾಸಿ ಮಹಾದೇವ ಪೂಜಾರಿ ಹಾಗೂ ಬೇಬಿ ಪೂಜಾರ್‍ತಿ ದಂಪತಿಯ ಪುತ್ರರಾಗಿದ್ದಾರೆ.