ಬೈಂದೂರು;  ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು,ಯುವ ರೆಡ್‌ಕ್ರಾಸ್ ಘಟಕ,ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಬೈಂದೂರು ಇದರ ಸಹಯೋಗದೊಂದಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು ಮತ್ತು ಅಪರಾಧ ಮುಕ್ತ ಸಮಾಜ ಕಾರ್ಯಕ್ರಮ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮಾತನಾಡಿ ಯುವ ಸಮುದಾಯ ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಗಮನಹರಿಸಬೇಕು ಹಾಗೂ ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕಿದೆ.ಹರೆಯದ ವಯಸ್ಸಿನಲ್ಲಿ ಮಾದಕ ವ್ಯಸನಗಳ ಆಸಕ್ತಿ ಮಾಡುವುದು ಸಹಜ.ಆದರೆ ಇದು ಜೀವನವನ್ನೆ ಸರ್ವನಾಶದತ್ತ ಮುಳುಗಿಸುತ್ತದೆ.ಹೀಗಾಗಿ ಎಚ್ಚರಿಕೆ ಅತೀ ಅಗತ್ಯ ಹಾಗೂ ಮಾದಕ ವ್ಯಸನದಿಂದ ದೂರವಿರಬೇಕು ಎಂದರು.

ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಘು ನಾಯ್ಕ,ಸಂಪನ್ಮೂಲ ವ್ಯಕ್ತಿಗಳಾಗಿ ವಿನಾಯಕ ಬಿಲ್ಲವ ವೃತ್ತ ನಿರೀಕ್ಷಕರು ಭ್ರಷ್ಟಾಚಾರ ನಿಗ್ರಹ ದಳ ಚಿಕ್ಕಮಗಳೂರು,ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಸಭಾಪತಿ ನಿತಿನ್ ಶೆಟ್ಟಿ ಬೈಂದೂರು,ಖಜಾಂಚಿ ಸಂತೋಷ ಕುಮಾರ್ ಶೆಟ್ಟಿ,ಯುವ ರೆಡ್‌ಕ್ರಾಸ್ ಘಟಕದ ಡಾ.ಶಿವಕುಮಾರ್ ಪಿ.ವಿ,ಎನ್.ಎಸ್.ಎಸ್ ಘಟಕದ ರಾಷ್ಟ್ರೀಯ ಯೋಜನಾಧಿಕಾರಿಗಳಾದ ನಾಗರಾಜ ಶೆಟ್ಟಿ,ಲತಾ ಪೂಜಾರಿ ಶಿರೂರು ಉಪಸ್ಥಿತರಿದ್ದರು.

ದಿಕ್ಷಾ ಪ್ರಥಮ ಬಿ.ಎ ಸ್ವಾಗತಿಸಿದರು.ಅನುಶ್ರೀ ತೃತೀಯ ಬಿ.ಎ ಕಾರ್ಯಕ್ರಮ ನಿರ್ವಹಿಸಿದರು.ಸುಶ್ಮೀತಾ ತೃತೀಯ ಬಿ.ಎ ವಂದಿಸಿದರು.

News/Giri shiruru

 

Leave a Reply

Your email address will not be published.

14 + 14 =