ಬೈಂದೂರು: ತಲೆತಲಾಂತರದಿಂದ ಅನುಭೋಗದಲ್ಲಿರುವವರ ಭೂಮಿಗಳನ್ನು ಸಾಂಧರ್ಭಿಕ ದಾಖಲೆ ಸಿದ್ದಪಡಿಸಿ ಕಂದಾಯ ಇಲಾಖೆಗೆ ಅಸಮರ್ಪಕ ಮಾಹಿತಿ ನೀಡಿ ದಾಖಲೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಭೂ ಕಬಳಿಸುವ ತಂಡ ಸಕ್ರೀಯವಾಗಿರುವುದು ಕಳವಳಕಾರಿ ವಿದ್ಯಮಾನ.ಮಾಧ್ಯಮದ ಮೂಲಕ ಈ ಮಾಹಿತಿ ದೊರೆತಿದೆ.ಬೈಂದೂರು ಕ್ಷೇತ್ರದಲ್ಲಿ ಇಂತಹ ದೌರ್ಜನ್ಯಗಳಿಗೆ ಯಾವಯದೆ ಕಾರಣಕ್ಕೂ ಅವಕಾಶವಿಲ್ಲ.ಮಾನ್ಯ ಸಂಸದರು,ಶಾಸಕರು ಕೂಡ ಈ ವಿಷಯ ಗಂಭೀರವಾಗಿ ಪರಿಗಣಿಸಿದ್ದು ಸಂಭಂದಪಟ್ಟ ಅಧಿಕಾರಿಗಳಿಗೂ ಕೂಡ ಸತ್ಯಾಸತ್ಯತೆ ವರದಿ ಕೇಳಲಾಗುವುದು.ಒಂದೊಮ್ಮೆ ಅಧಿಕಾರಿಗಳು ಈ ಜಾಲದಲ್ಲಿದ್ದರೆ ಅಂತವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ತಿಳಿಸಲಾಗುವುದು.ಮತ್ತು ದೌರ್ಜನ್ಯಕ್ಕೊಳಗಾದವರ ಜೊತೆ ಶಾಸಕರು ,ಪಕ್ಷ ಮತ್ತು ನಾವಿದ್ದೆವೆ.ಸೂಕ್ತ ದಾಖಲೆಗಳೊಂದಿಗೆ ಬಿಜೆಪಿ ಕಛೇರಿಯಲ್ಲಿ ಮನವಿ ನೀಡಿದರೆ ಭೂ ವಂಚನೆ ಗೊಳಗಾದವರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಹೇಳಿದ್ದಾರೆ.
ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಬೈಂದೂರಿನ ಯಡ್ತರೆ ಮನೆ,ಹೊಳ್ಳರ ಮನೆ ಸೇರಿದಂತೆ ಅನೇಕ ದೊಡ್ಡ ಮನೆತನದ ಭೂಮಿಗಳು ಹಳ್ಳಿಭಾಗದಲ್ಲಿದೆ.ಅದರಲ್ಲಿ ಕೆಲವು ಭಾಗ ಊಳುವವನೆ ಒಡೆಯ ಯೋಜನೆಯಲ್ಲಿ ಮಂಜೂರಾತಿ ಆದರೆ ಇನ್ನು ಕೆಲವು ಕ್ರಷಿಕರ ಸ್ವಾಧೀನದಲ್ಲಿದ್ದರು ಕೂಡ ದಾಖಲೆ ಬದಲಾಗಿಲ್ಲ.ಇದನ್ನು ಬಳಸಿಕೊಂಡ ಕೆಲವು ಭೂ ಮಾಫಿಯಾದವರು ಮೂಲ ದಾಖಲೆ ಇದ್ದವರಿಗೆ ಒಂದಿಷ್ಟು ಹಣದ ಆಮಿಷ ಮತ್ತು ಸುಳ್ಳು ಮಾಹಿತಿ ನೀಡಿ ವೀಲ್ ಮಾಡಿಕೊಂಡು ದಾಖಲೆ ಬದಲಿಸಿದ್ದಾರೆ.ಇನ್ನು ಕೆಲವರಿಗೆ ಅನುಭೋಗದಲ್ಲಿದ್ದವರಿಗೆ ನಿಮ್ಮ ಜಾಗ ಕೊಡುವುದಾಗಿ ನಂಬಿಸಿ ಜಾಗಬಿಡಿಸಿಕೊಂಡು ವಂಚಿಸಿದ ಮಾಹಿತಿ ಇದೆ.ಇಂತಹ ವ್ಯವಸ್ಥಿತ ತಂಡ ಇದ್ದು ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿ ನೀಡಿ ದಾಖಲೆ ಬದಲಾಗಿರುವ ಸಾಧ್ಯತೆ ಇದೆ.ಸರ್ವೆ ಇಲಾಖೆ,ಕಂದಾಯ ಇಲಾಖೆ ಕುರಿತು ಅನೇಕ ದೂರು ಗಳಿವೆ.ಶೀಘ್ರ ಜಿಲ್ಲಾಧಿಕಾರಿಗಳ ಮೂಲಕವೇ ಬೈಂದೂರಿನಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುವುದು..ಎಂದರು.ಬೈಂದೂರು ಗಾಂದಿ ಮೈದಾನದಲ್ಲಿ ನಡೆಯುತ್ತಿರುವ ಪುರಭವನ ನಿರ್ಮಾಣ ಅಡೆತಡೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಸಂಸದರು ಹಾಗೂ ಶಾಸಕರು ಬೈಂದೂರು ಅಭಿವ್ರದ್ದಿಗೆ ಹಲವು ಮಹತ್ವಕಾಂಕ್ಷೆ ಯೋಜನೆ ಜಾರಿಗೆ ತಂದಿದ್ದಾರೆ.ಮಾದರಿ ಕ್ಷೇತ್ರದ ಕನಸು ಸಾಕಾರಗೊಳ್ಳುತ್ತಿದೆ.ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ವಾಸ್ತವತೆ ಮನದಟ್ಟು ಮಾಡಿ ಶಾಸಕರು ಸಂಸದರ ಅಭಿವ್ರದ್ದಿ ಕಾರ್ಯದ ನಿಲುವುಗಳಿಗೆ ಬದ್ದ ನಾಗಿದ್ದೇವೆ ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ,ಬೈಂದೂರು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ,ಬೈಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಪೂಜಾರಿ,ಕೊಲ್ಲೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ ಪೂಜಾರಿ ಹಾಜರಿದ್ದರು.

News/Giri shiruru

 

Leave a Reply

Your email address will not be published.

1 × 4 =