ಶಿರೂರು: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ ರವರ 84ನೇ ಹುಟ್ಟುಹಬ್ಬ ಆಚರಣೆ ಶಿರೂರಿನಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ವತಿಯಿಂದ ಮಾಜಿ ಶಾಸಕರನ್ನು ಸಮ್ಮಾನಿಸಲಾಯಿತು.ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಜನಸೇವೆ ಮಾಡಲು ಅವಕಾಶ ದೊರೆತಿರುವುದು ನನಗೆ ಸಂತೃಪ್ತಿ ಕೊಟ್ಟ ಕ್ಷಣಗಳಾಗಿವೆ.ಪ್ರಾಮಾಣಿಕ ಸೇವೆಯನ್ನು ಜನ ಸದಾ ಗುರುತಿಸುತ್ತಾರೆ.ಪ್ರೀತಿಯಿಂದ ಹಿತೈಷಿಗಳು ಹುಟ್ಟುಹಬ್ಬದಂದು ನೀಡಿದ ಗೌರವ ಅತ್ಯಂತ ಸಂತೋಷ ನೀಡಿದೆ.ಇರುವ ಅವಧಿಯಲ್ಲಿ ಸಂತೋಷದಿಂದ ಮತ್ತು ನೆಮ್ಮದಿಯಿಂದ ಬಾಳುವುದು ಬದುಕಿನ ಶ್ರೇಯಸ್ಸಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಾಬು ಹೆಗ್ಡೆ, ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ,ಕುಂದಾಪುರ ತಾ.ಪಂ ಮಾಜಿ ಉಪಾಧ್ಯಕ್ಷ ಕಿಶನ್ ಹೆಗ್ಡೆ,ಬೈಂದೂರು ತಾ.ಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ,ಬೈ,ವ್ಯ.ಸೇ.ಸ.ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ ತಗ್ಗರ್ಸೆ,ಕುಂದಾಪುರ ತಾ.ಪಂ ಮಾಜಿ ಉಪಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಕಡ್ಕೆ,ಗುರುಕುಲ ಸ್ಕೂಲ್ ಆಫ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ,ಎ.ಸಿ.ಎಫ್.ಓ ಶ್ರೀಧರ ಪಿ.ಎಸ್,ಉದ್ಯಮಿಗಳಾದ ವೆಂಕಟೇಶ ಕಿಣಿ,ಜಯಾನಂದ ಹೋಬಳಿದಾರ್,ರಾಮಚಂದ್ರ ಪ್ರಭು,ಬಿ.ಎಸ್.ಸುರೇಶ್ ಶೆಟ್ಟಿ,ಉದಯ ಕುಮಾರ್ ಶೆಟ್ಟಿ,ವಿಷ್ಣು ಪಡಿಯಾರ್,ನಾರಾಯಣ ನಾಯ್ಕ ನೇರಳಕಟ್ಟೆ,ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ನಾಗರಾಜ ಕಾಮದೇನು,ಬೈಂದೂರು ಬಿಜೆಪಿ ಪ್ರಭಾರಿ ಕಿಶೋರ್ ಕುಮಾರ್,ಮಂಗಳೂರು ಬಿಜೆಪಿ ಪ್ರಭಾರಿ ರಾಜೇಶ ಕಾವೇರಿ,ಶಿರೂರು ಬಿಜೆಪಿ ಮುಖಂಡರಾದ ಸತೀಶ ಪ್ರಭು,ಗ್ರಾ.ಪಂ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ ಕರಾವಳಿ,ಬಾಬು ಮೊಗೇರ್,ಸುರೇಂದ್ರ ದೇವಾಡಿಗ,ಬೈಂದೂರು ರಾಮಕ್ಷತ್ರೀಯ ಸಮಾಜದ ಹಿರಿಯರಾದ ರಾಮಕೃಷ್ಣ ಶೇರುಗಾರ್,ಬಾಲಕೃಷ್ಣ ಬೈಂದೂರು,ಕೆಂಚನೂರು ರವಿ ಗಾಣಿಗ,ಬಾಲಣ್ಣ,ವಕೀಲ ಕೆ.ಬಿ ಶೆಟ್ಟಿ,ಪತ್ರಕತ೯ ಕೆ.ಸಿ ರಾಜೇಶ್,ಆಕ್ರಮ ಸಕ್ರಮ ಸಮಿತಿ ಸದಸ್ಯ ದಿನೇಶ ಕುಮಾರ್ ಶಿರೂರು,ದಿ.ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗೇರ್,ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
ಪಡುವರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾಶಿವ ಡಿ.ಪಡುವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು