ಬೈಂದೂರು;ಬೈಂದೂರು ಕ್ಷೇತ್ರದ ಅಭಿವ್ರದ್ದಿ ಬಗ್ಗೆ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ನೀಡಿದ ಶಿವಮೊಗ್ಗ ಲೋಕಸಭಾ ಸಂಸದ ಬಿ .ವೈ ರಾಘವೆಂದ್ರ ರವರ ನಡೆಗೆ ಬೈಂದೂರು ಬಿಜೆಪಿ ವಲಯದಲ್ಲಿ ಪರೋಕ್ಷ ರಾಜಕೀಯ ಮೇಲಾಟ ಆರಂಭವಾಗಿದೆ.ಬಿಜೂರು ರೈಲ್ವೆ ಹೋರಾಡದ ವಿಷಯದಲ್ಲಿ ಬಿಜೂರು ರೈಲ್ವೇ ಯಾತ್ರಿಕರ ಹೋರಾಟ ಸಮಿತಿ ಅಧ್ಯಕ್ಷ  ಸುನೀಲ್ ಪೂಜಾರಿ ಕೆರ್ಗಾಲ್ ಬಹಿರಂಗವಾಗಿ ಸಂಸದರ ವಿರುದ್ದ ಹರಿಹಾಯ್ದಿದ್ದಾರೆ.ಅವರು ರೈಲ್ವೆ ಯಾತ್ರಿಕರ ಹೋರಾಟ ಸಮಿತಿ ಬಿಜೂರು ಇದರ ವತಿಯಿಂದ ಬುಧವಾರ ಬೆಳಿಗ್ಗೆ ಉಪ್ಪುಂದ ಪರಿಚಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಬೈಂದೂರು ಬಿಜೂರು ಮಲತಾಯಿ ದೋರಣೆ ಆರೋಪ: ಸಂಸದ ಬಿ. ವೈ ರಾಘವೇಂದ್ರ ರವರಿಗೆ ಬಿಜೂರು ಭಾಗದಲ್ಲಿ ಉತ್ತಮ ಬೆಂಬಲ ನೀಡಿದ್ದೇವೆ ಆದರೆ ರಾಘವೇಂದ್ರ ಬಿಜೂರು ಮತ್ತು ಇಲ್ಲಿನ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಕೆಲವು ಆಪ್ತರ ಮಾತು ಕೇಳಿ ಬಿಜೂರು ರೈಲ್ವೆ ನಿಲ್ದಾಣ ನಗಣ್ಯ ಮಾಡಿ ಬೈಂದೂರುರನ್ನು ಮೇಳೈಸುತ್ತಿದ್ದಾರೆ ಇದರ ಹಿಂದಿನ ಉದ್ದೇಶ ಬೇರೆ ಇದೆ ಮಾತ್ರವಲ್ಲದೆ ಸಂಸದರು ಹದಿನೈದು ದಿನಗಳ ಗಡುವು ಒಳಗೆ ಬಿಜೂರಿಗೆ ಆಗಮಿಸಿ ಕ್ರಮ ಕೈಗೊಳ್ಳದಿದ್ದರೆ ಈ ಭಾಗದ ಮುಖಂಡರು ಬ್ರಹತ್ ಜಾಥಾ ಮೂಲಕ ಆಕ್ರೋಶ ವ್ಯಕ್ತ ಪಡಿಸುತ್ತೆವೆ ಎನ್ನುವ ಮೂಲಕ ಬಿಜೆಪಿ ಪಕ್ಷದ ಮುಖಂಡರೆ ಸಂಸದರ ನಡೆಯನ್ನು ಖಂಡಿಸುವ ಮೂಲಕ ಇರುಸು ಮುರುಸು ಉಂಟು ಮಾಡಿದ್ದಾರೆ.

ಇದ್ದಕ್ಕಿದ್ದ ಹಾಗೆ ಕಾವೇರಿದ ಹೋರಾಟಕ್ಕೆ ಸಂಸದರ ನಡೆ ಕಾರಣ ಇರಬಹುದೆ; ಇವತ್ತಿನ ಪತ್ರಿಕಾಗೋಷ್ಟಿ ಬೈಂದೂರು ರಾಜಕೀಯ ನಡೆಯ ಮತ್ತೊಂದು ವೈರುದ್ಯವನ್ನು ಹೊರಹಾಕಿದೆ .ಸುನೀಲ್ ಪೂಜಾರಿ ಸಂಸದರ ವಿರುದ್ದ ಹರಿಹಾಯ್ದ ಹಿನ್ನಲೆ ಇತ್ತೀಚಿನ ಕಾರ್ಯಕ್ರಮದಲ್ಲಿ ಸಂಸದರ ನಡೆ ಕಾರಣವಾಗಿರಬಹುದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ ಕಾರಣವೆಂದರೆ ಈ ಕಾರ್ಯಕ್ರಮದ ಜವಬ್ದಾರಿ ಶಾಸಕರ ಜೊತೆಯಾಗಿ ಸುನಿಲ್ ಪೂಜಾರಿ ವಹಿಸಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಬೇಟಿ ನೀಡಿದಾಗ ಸಂಸದರ ನಡೆ ಕೆಲವು ಕಾರ್ಯಕರ್ತರಿಗೆ ಬೇಸರ ತಂದಿತ್ತು ಆ ಸಮಯದಲ್ಲೆ ಆಕ್ರೋಶ ಹೊರಹಾಕಿದ ಕೆಲವು ಕಾರ್ಯಕರ್ತರ ಮುಂದುವರಿಗ ಭಾಗ ಇದಾಗಿದೆ. ಶಾಸಕರು ಮತ್ತು ಸಂಸದರು ಜನರ ವಿಷಯದಲ್ಲಿ ಸಮಾನ ಜವಬ್ದಾರರಾಗಿದ್ದು ಪತ್ರಿಕಾ ಗೋಷ್ಟಿಯಲ್ಲಿ ಶಾಸಕರನ್ನು ಅಭಿನಂದಿಸಿ ಸಂಸದರ ವಿರುದ್ದ ಹರಿ ಹಾಯ್ದಿರುವುದು ಪರೋಕ್ಷವಾಗಿ ಸಂಸದರ ಮೇಲಿನ ಆಕ್ರೋಶ ಹೊರಬಂದಿದೆ.

ಬಿಜೂರು ಹೋರಾಟ ನ್ಯಾಯಯುತ: ಬಿಜೂರು ರೈಲ್ವೆ ಹೋರಾಟ ನ್ಯಾಯಯುತವಾಗಿದೆ ಮತ್ತು ಅಲ್ಲಿನ ಜನರ ಬೇಡಿಕೆ ಮಾನ್ಯವಾಗಿದೆ ಆದರೆ ಬೈಂದೂರು ರೈಲ್ವೆ ಹೋರಾಟವನ್ನು ಆಪಾದಿಸುವುದು ತಾಲೂಕು ಕೇಂದ್ರದ ಅಭಿವ್ರದ್ದಿಯ ಪ್ರಯತ್ನವನ್ನು ಪ್ರಶ್ನಿಸಿದಂತಿದೆ. ಬೈಂದೂರು ರೈಲ್ವೆ ನಿಲ್ದಾಣದ ಅಭಿವ್ರದ್ದಿ ಅಲ್ಲಿನ ಜನರ ಒಕ್ಕೊರಲಿನ ಹೋರಾಟದ ಪ್ರಯತ್ನವಾಗಿದೆ.ಗರೀಬ್ ರಥ ಬಿಜೂರಿನಲ್ಲಿ ನಿಲುಗಡೆ ಆಗುತ್ತಿದ್ದು ಪ್ರಯಾಣಿಕರ ಕೊರತೆಯಿಂದ ಬೈಂದೂರು ಹೋರಾಟ ಆಗುವ ಮೊದಲೆ ನಿಲುಗಡೆ ಕಡಿತ ಮಾಡಲಾಗಿದೆ.ಪೂನಾ – ಎರ್ನಾಕುಲಂ ಬಿಜೂರಿನಲ್ಲಿ ಪ್ರಯಾಣಿಕರಿಲ್ಲದೆ ನಿಲುಗಡೆ ಕಡಿತ ಮಾಡಲಾಗಿದೆ ಇದರಲ್ಲಿ ಸಂಸದರ ಪಾತ್ರವಿಲ್ಲ ಎನ್ನುವುದು ಸಂಸದರ ಆಪ್ತ ವಲಯದ ಅಭಿಪ್ರಾಯ.ಬೈಂದೂರು ಕ್ಷೇತ್ರದಲ್ಲಿ ಶಾಸಕರು ಬಿಜೆಪಿ ಮತ್ತು ಸಂಸದರು ಬಿಜೆಪಿಯವರಾಗಿದ್ದು ಬಿಜೆಪಿ ಮುಖಂಡರೆ ಅಸಮಾಧಾನ ಹೊರಹಾಕುತ್ತಿರುವುದು ಬೈಂದೂರು ರಾಜಕೀಯ ನಡೆಯಲ್ಲಿ  ಎಲ್ಲವು ಸರಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿ ತೋರಿಸುತ್ತಿದೆ.

ಹೋರಾಟಗಾರ ಡಾ. ಸುಬ್ರಹ್ಮಣ್ಯ ಭಟ್‌ ಮಾತನಾಡಿ, ಬಿಜೂರು ರೈಲ್ವೆ ನಿಲ್ದಾಣ ನಿರ್ಮಿಸುವ ಸಂದರ್ಭ ಸುತ್ತಮುತ್ತಲಿನ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡು, ಅತೀ ಕಡಿಮೆ ಪರಿಹಾರ ಪಡೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ಕೆಲವು ಕುಟುಂಬದ ಸದಸ್ಯರಿಗೆ ಮಾತ್ರವೇ ಉದ್ಯೋಗ ದೊರೆತಿದೆ. ಅವಿಭಕ್ತ ಕುಟುಂಬದ ತೊಂದರೆಗೊಳಗಾಗಿದೆ. ಅದರ ಹೊರತಾಗಿಯೂ ಬಿಜೂರು ರೈಲ್ವೆ ನಿಲ್ದಾಣ ಆದಾಗಿನಿಂದಲೂ ಎಲ್ಲಾ ಸಂಸದರೂ ನಿಲ್ದಾಣದ ಅಭಿವೃದ್ಧಿ, ರೈಲು ನಿಲುಗಡೆಯ ಬಗ್ಗೆ ಅಸಡ್ಡೆ ತೋರುತ್ತಲೇ ಬಂದಿದ್ದಾರೆ. ಹಿಂದಿನಿಂದಲೂ ಈ ಬಗ್ಗೆ ಹೋರಾಟ ಮಾಡುತ್ತಿದ್ದು, ಮುಂದೆಯೂ ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೈಲ್ವೆ ಯಾತ್ರಿಕರ ಹೋರಾಟ ಸಮಿತಿ ಬಿಜೂರು  ಗೌರವಾಧ್ಯಕ್ಷ ಪುಂಡಲೀಕ ಕಿಣಿ ಕಂಚಿಕಾನು,ಶೇಷ ಭಟ್ ಕೆರ್ಗಾಲ್,ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

nineteen − fifteen =