ಬೈಂದೂರು; ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿ. ಬೈಂದೂರು ಇದರ 9ನೇ ವಾರ್ಷಿಕ ಸಾಮಾನ್ಯ ಸಭೆ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಕೆ.ವೆಂಕಟೇಶ್ ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯು ವರದಿ ವರ್ಷದಲ್ಲಿ 24 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು 74.64 ಲಕ್ಷ ಲಾಭ ಲಾಭ ಗಳಿಸಿದೆ.ಜಿಲ್ಲೆಯ ಸೌಹಾರ್ಧಗಳಲ್ಲಿ ಅತ್ಯುತ್ತಮ ಆರ್ಥಿಕ ವ್ಯವಹಾರದ ಮೂಲಕ ಪ್ರಗತಿ ಕಂಡಿದೆ ಹಾಗೂ ವರದಿ ವರ್ಷದಲ್ಲಿ ಸಂಘವು ಅಡಿಟ್ ವರ್ಗಿಕರಣದಲ್ಲಿ ಎ ಶ್ರೇಣಿ ಪಡೆದಿದೆ.ಈ ವರ್ಷದ ಲಾಭದಲ್ಲಿ ಸದಸ್ಯರಿಗೆ ಶೇ.14% ಡಿವಿಡೆಂಡ್ ನೀಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ,ಸಂಸ್ಥೆಯ ಉಪಾಧ್ಯಾಕ್ಷ ಯು ಪ್ರಕಾಶ್ ಭಟ್,ನಿರ್ದೇಶಕರುಗಳಾದ ಪ್ರಸಾದ ಪ್ರಭು, ಅರುಣ್ ಕುಮಾರ್ ಶಿರೂರು,ಕೆ.ಗೋಪಾಲಕೃಷ್ಣ, ಭಿಮೇಶ್ ಕುಮಾರ್ ಎಸ್.ಜಿ, ಬಾಲಕೃಷ್ಣ ಪ್ರಭು, ವೈ.ಸಿದ್ದೇಶ್, ಗಣೇಶ ಗಾಣಿಗ,ಹರೀಶ್ ಶೇಟ್, ಮೋಹಿನಿ .ಜಿ ಶೆಟ್ಟಿ, ಗೌರಿ ಮಂಗೇಶ್,ಮಮತಾ ಕಿಣಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.





ಈ ಸಂಧರ್ಭದಲ್ಲಿ ಗೋರಕ್ಷಕರಾದ ಸಂಜೀವ ದೇವಾಡಿಗ ರವರನ್ನು ಹಾಗೂ ಪಿ.ಯು.ಸಿ ವಿಭಾಗದಲ್ಲಿ ಸಾಧನೆಗೈದ ರಶ್ಮೀ ಯವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಸಂಘದ ಎ ವರ್ಗದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವರ್ಹಣಾಧಿಕಾರಿ ಶ್ರೀನಿವಾಸ ಎಂ. ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಪ್ರಸಾದ ಪ್ರಭು ವಂದಿಸಿದರು.ಸಂಸ್ಥೆಯ ಸಿಬ್ಬಂದಿ ಅಕ್ಷಯ ಸನ್ಮಾನ ಪತ್ರ ವಾಚಿಸಿದರು.
ವರದಿ/ಚಿತ್ರ: ಗಿರಿ ಶಿರೂರು