ಬೈಂದೂರು,ಸೆ.12: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 28ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಸೆ.14 ಹಾಗೂ 15 ರಂದು ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ: ಸೆ.14 ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ,ಮದ್ಯಾಹ್ನ 12 ಗಂಟೆಗೆ ಸಹಸ್ರನಾಮ ಪೂಜೆ,ಮಹಾಪೂಜೆ,ಮಹಾಮಂಗಳಾರತಿ,ಸಂಜೆ 6 ರಿಂದ ಭಜನಾ ಕಾರ್ಯಕ್ರಮ.ರಾತ್ರಿ ರಂಗಪೂಜೆ,ರಾತ್ರಿ ಪೂಜೆ ನಡೆಯಲಿದೆ.
ಸಂಜೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ,ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ ಯುವಶಕ್ತಿ ಕಲಾ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸೆ.15 ರಂದು ಬೆಳಿಗ್ಗೆ 10 ಗಂಟೆಗೆ ಗಣಹೋಮ,ಮದ್ಯಾಹ್ನ ಸರ್ವಪೂಜೆ,ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ವಿಸರ್ಜನಾ ಪೂಜೆ,ಫಲಾವಳಿಗಳ ಏಲಂ ಬಳಿಕ ಆದ್ದೂರಿ ಪುರಮೆರವಣಿಗೆ ಮೂಲಕ ಅರಬ್ಬಿ ಸಮುದ್ರದಲ್ಲಿ ಜಲಸ್ಥಂಭನ ನಡೆಯಲಿದೆ.ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಕರಾವಳಿ ಪ್ರಕಟಣೆಯಲ್ಲಿ ತಿಳಿಸಿದೆ

Leave a Reply

Your email address will not be published. Required fields are marked *

two × four =