ಶಿರೂರು; ಅಪಘಾತ ಹೊಂದಿದ ವಾಹನವನ್ನು ಮೇಲೆತ್ತುವ ವೇಳೆ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಲಾರಿ ನಿಲ್ಲಿಸಿದ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಹಾಗೂ ನಾಲ್ಕು ಬೈಕ್ ಗಳು ಜಖಂ ಗೊಂಡಿದ್ದು ಬೈಕ್ ನಲ್ಲಿದ್ದ ಸವಾರ ಸ್ಥಳದಲ್ಲೆ ಮ್ರತಪಟ್ಟಿದ್ದಾನೆ. ಮ್ರತವ್ಯಕ್ತಿ ಶಿರೂರಿನ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.ಹೆದ್ದಾರಿಯಲ್ಲಿ ಸರಕು ತುಂಬಿದ ಲಾರಿಯನ್ನು ಹೆದ್ದಾರಿ ನಿರ್ವಣೆಯವರು ಮೇಲೆತ್ತುವ ಸಂದರ್ಭದಲ್ಲಿ ರಸ್ತೆ ತಡೆ ಮಾಡಲಾಗಿತ್ತು.ವಾಹನ ಸಂಚಾರ ತಡೆಗೆ ಬ್ಯಾರಿಕೆಡ್ ಹಾಕಲಾಗಿತ್ತು .ಇಳಿಜಾರು ರಸ್ತೆಯಾದ ಕಾರಣ ಅತಿವೇಗದಿಂದ ನುಗ್ಗಿದ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.ನಿಯಂತ್ರಣ ತಪ್ಪಿದ ಲಾರಿ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿಯಾಗದಿದ್ದಲ್ಲಿ ಬಾರಿ ಅವಘಡ ನಡೆಯುತ್ತಿತ್ತು.ಹೆದ್ದಾರಿ ಮುಂಭಾಗದಲ್ಲಿದ್ದ ಸಾರ್ವಜನಿಕರು ಹೊಟೇಲ್ ಎದುರುಗಡೆ ಇದ್ದ ವಾಹನಗಳಿಗೆ ಡಿಕ್ಕಿಯಾಗುವ ಸಾದ್ಯತೆಗಳಿತ್ತು.ರಬ್ಬರ್ ತುಂಬಿದ ಲಾರಿ ಕೇರಳದಿಂದ ಮಹಾರಾಷ್ಟ್ರದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ.


ಮ್ರತವ್ಯಕ್ತಿ ಶಿರೂರಿನ ನಾಗೇಂದ್ರ ಮಹಾಲೆ

ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.