ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ.ತ್ರಾಸಿ ಶಾಖೆ ಹಾಗೂ ನಬಾರ್ಡ್ ಸಹಯೋಗದಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ತ್ರಾಸಿ ಶಾಖಾ ಕಛೇರಿಯಲ್ಲಿ ನಡೆಯಿತು.
ಬ್ಯಾಂಕಿನ ನಿವೃತ್ತ ಉಪಪ್ರಬಂಧಕ ಜಿ.ಸೀತಾರಾಮ ಮಡಿವಾಳ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಲಡ್ ಬ್ಯಾಂಕ್ ಕುಂದಾಪುರ ವಲಯ ಹಾಗೂ ಆರ್ಥಿಕ ಅರಿವು ಕಾರ್ಯಕ್ರಮದ ಸಲಹೆಗಾರರಾದ ಆಶಾಲತಾ ಗ್ರಾಹಕರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಆಲೂರು -ಹರ್ಕೂರು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ,ಪಡುಕೋಣೆ ವ್ಯ.ಸೇ.ಸಹಕಾರಿ ಸಂಘದ ಅಧಿಕಾರಿ ಶಶಿಕಿರಣ್ ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ತ್ರಾಸಿ ಶಾಖೆಯ ಪ್ರಬಂಧಕ ವೆಂಕಟೇಶ ಬಿಲ್ಲವ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ನವೋದಯ ಪ್ರೇರಕ ವಾಸುದೇವ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.ಪದ್ಮನಾಭ ಮೊಗೇರ್ ವಂದಿಸಿದರು.