ಬೈಂದೂರು; ಜಿಲ್ಲಾಡಳಿತ ಉಡುಪಿ,ಉಡುಪಿ ಪಟ್ಟಣ ಪಂಚಾಯತ್ ಬೈಂದೂರು, ರೋಟರಿ ಕ್ಲಬ್ ಬೈಂದೂರು ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಬೀಚ್ ಸ್ವಚ್ಚತಾ ಕಾರ್ಯಕ್ರಮದ ಪ್ರಯುಕ್ತ ಕಡಲಕಿನಾರ ಸ್ವಚ್ಚತೆ ಮತ್ತು ಮಾಹಿತಿ ಜಾಥಾ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆಯಿತು.

ಬೈಂದೂರು ಪಟ್ಡಣ ಪಂಚಾಯತ್ ಮುಖ್ಯಾಧಿಕಾರಿ ಮಾತನಾಡಿ ಕಡಲ ಕಿನಾರೆಗಳು ಮತ್ತು ಪರಿಸರ ಸ್ವಚ್ಚತೆಗೆ ದೇಶಾದ್ಯಂತ ವಿಶೇಷ ಆದ್ಯತೆ ನೀಡಿದ್ದು ಸ್ವಚ್ಚತೆ ಪ್ರತಿಯೊಬ್ಬರ ಜವಬ್ದಾರಿಯಾಗಿದೆ.ಕಡಲ ಕಿನಾರೆ ಮತ್ತು ಪರಿಸರ ಸ್ವಚ್ಚತೆಯಿಂದ ಜೀವ ಸಂಕುಲಗಳ ಉಳಿವಿನ ಜೊತೆಗೆ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ ಎಂದರು

ವಲಯ ರಾಯಬಾರಿ ಐ.ನಾರಾಯಣ ಮಾತನಾಡಿ ಸ್ವಚ್ಚತೆಯ ಜಾಗ್ರತಿ ಪ್ರತಿ ಮನೆ ಮನೆಯಿಂದಲೆ ಮೂಡಬೇಕು ಮತ್ತು ಪ್ರಯಿಯೊಬ್ಬರ ಜವಬ್ದಾರಿಯಾಗಬೇಕು ಎಂದರು.

ಬೈಂದೂರು ಸಿಟಿ ಜೆಸಿಐ ಅದ್ಯಕ್ಷೆ ಚೈತ್ರ, ಕ್ಲೀನ್ ಕಿನಾರ ತಂಡದ ರಾಘವೇಂದ್ರ ಪಡುವರಿ, .ಎನ್ ಎಸ್ ಎಸ್ ತಂಡದ ಪ್ರಸಾದ ಪ್ರಭು,ದಲಿತ ಸಂಘಟನೆಯ ಸದಸ್ಯರು ಹಾಜರಿದ್ದರು.

ಸಂತೋಷ ಕಾರ್ಯಕ್ರಮ ನಿರೂಪಿಸಿದರು.ರೋಟರಿ ಕ್ಲಬ್ ಕಾರ್ಯದರ್ಶಿ ಮಣಿಕಂಠ ವಂದಿಸಿದರು

 

 

Leave a Reply

Your email address will not be published. Required fields are marked *

20 − 8 =