ಬೈಂದೂರು; ಇತ್ತೀಚೆಗೆ ಬೈಂದೂರು ವ್ಯಾಪ್ತಿಯಲ್ಲಿ ಎರಡು ಪ್ರಮಖ ಪತ್ತಿಕಾಗೋಷ್ಟಿ ನಡೆದಿದ್ದು ಬಹುಮುಖ್ಯವಾಗಿ ಬಿಜೆಪಿ ಮುಖಂಡ ಸುನೀಲ್ ಪೂಜಾರಿ ನೇತ್ರತ್ವದ ಬಿಜೂರು ರೈಲ್ವೆ ಯಾತ್ರಿ ಸಂಘದ ಬೇಡಿಕೆ ನ್ಯಾಯಯುತವಾಗಿದೆ ಮತ್ತು ಅಲ್ಲಿನ ಜನರ ತ್ಯಾಗದ ನೋವು ಆಕ್ರೋಶವಾಗಿ ಹೊರಹೊಮ್ಮಿದೆ ಮತ್ತು ಬಿಜೂರು ರೈಲ್ವೆ ನಿಲ್ದಾಣ ಅಭಿವ್ರದ್ದಿ ಬೇಡಿಕೆ ಸ್ವಾಗತಾರ್ಹ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ರವಿವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ  ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ ಬೈಂದೂರಿನಲ್ಲಿ ವೆಂಕಟೇಶ ಕಿಣಿ ನೇತ್ರತ್ವದ ರೈಲ್ವೆ ಯಾತ್ರಿ ಸಂಘ ಹೋರಾಡದ ಮೂಲಕ ನಿಲ್ದಾಣವನ್ನು ಅಭಿವ್ರದ್ದಿಪಡಿಸಿದೆ ಇದು ಅಭಿನಂದನೀಯ ಮತ್ತು ಅಲ್ಲಿನ ಜನರ ಶ್ರಮ ಅಪಾರವಾಗಿದೆ.ಬೈಂದೂರು ರೈಲ್ವೆ ನಿಲ್ದಾಣ ಹಾಲ್ಟಿಂಗ್ ನಿಲ್ದಾಣವಲ್ಲ ಸುರಂಗ ಇರುವ ಕಾರಣ ಶಿರೂರು ಬಿಜೂರಿನಲ್ಲಿ ಪರ್ಯಾಯ ವ್ಯವಸ್ಥೆ ಯೋಜನೆ ಮಾಡಿದ್ದು ಕೊನೆಯ ಹಂತದಲ್ಲಿ ಸುರಂಗ ಕಾರ್ಯ ಯಶಸ್ವಿಯಾದ ಬಳಿಕ ಬೈಂದೂರು ನಿಲ್ದಾಣ ದೊರಕಿದೆ. ಬಿಜೂರಿನಲ್ಲಿ ಡಬ್ಬಲ್ ಟ್ರ್ಯಾಕ್ ಆರಂಭದಲ್ಲೆ ಮಾಡಿದ್ದು ಬೈಂದೂರಿಗೆ ಸವಲತ್ತು ದೊರೆತ ಬಳಿಕ ನಗಣ್ಯವಾಗಿದೆ.ಇದರ ಬಗ್ಗೆ ಅಂಕಿ ಅಂಶಗಳನ್ನು ಅಲ್ಲಿನ ಹೋರಾಟ ಸಮಿತಿಯವರು ರೈಲ್ವೆ ಬೋಡ್೯ ಸಮಿತಿ ಬೇಟಿ ಮಾಡಲಿದ್ದಾರೆ ಸಂಸದರಿಗೂ ಈ ಬಗ್ಗೆ ಮಾತನಾಡಿದ್ದು ಶೀಘ್ರ ಬಿಜೂರಿಗೆ ಬೇಟಿ ಮಾಡುವುದಾಗಿ ತಿಳಿಸಿದ್ದಾರೆ. ಚಾತುರ್ಮಾಸ ಅತ್ಯಂತ ಯಶಸ್ವಿಯಾಗಿದ್ದು ಗಣೇಶ ಚೌತಿ ದಿದಂದು ಸೀಮೋಲಂಘನ ನಡೆಸುವ ಮೂಲಕ ಸಮಾಪನವಾಗಲಿದೆ ಎಂದರು.
ಕರಾವಳಿ ಸಂಪುಟ ಸಭೆ ಇಲ್ಲಿನ ಬೇಡಿಕೆಗಳಿಗೆ ನ್ಯಾಯ ದೊರಕಲಿ;  ಸೆ 18 ರಂದು ಕರಾವಳಿ ಭಾಗದ ಅಭಿವ್ರದ್ದಿಯಲ್ಲಿ ಮಂಗಳೂರಿನಲ್ಲಿ ನಡೆಯುವ ಸಂಪುಟ ಸಭೆ ಸ್ವಾಹತಾರ್ಹ ಇಲ್ಲನ ಕಸ್ತೂರಿ ರಂಗನ್ ಸಮಸ್ಯೆಗೆ ಸ್ಪಷ್ಟತೆ ದೊರಕಲಿ ಗ್ರಾಮೀಣ ಭಾಗಗಳನ್ನು ಪ. ಪಂ ವ್ಯಾಪ್ತಿಯಿಂದ ಕೈ ಬಿಡುವ ಕುರಿತು ದೀರ್ಘ ಸಮಯದಿಂದ ಹೋರಾಟ ಮಾಡುತ್ತಿದ್ದು ಇದರ ಬಗ್ಗೆ ಸರಕಾರ ಸ್ಪಷ್ಟತೆ ನೀಡಬೇಕು ಕರಾವಳಿಯಲ್ಲಿ ಈ ಬಾರಿ ಮಳೆ ಕೈ ಕೊಟ್ಟಿದ್ದು ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ ಹೀಗಾಗಿ ಬಹು ನಿರೀಕ್ಷಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳಿದ್ದು ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗಣೇಶ ಉಪ್ಪುಂದ ಹಾಜರಿದ್ದರು.
ವರದಿ/ಗಿರಿ ಶಿರೂರು

Leave a Reply

Your email address will not be published. Required fields are marked *

one × 3 =