ಬೈಂದೂರು; ಆಧುನಿಕ ಜಗತ್ತು ಎಲ್ಲವನ್ನು ಸುಲಭಗೊಳಿಸಿದೆ.ಜಾಲತಾಣಗಳು ನಮಗೆ ಮಾಹಿತಿ ಒದಗಿಸಬಹುದು ಆದರೆ ಅನುಭವಗಳನ್ನಲ್ಲ.ಸಾಧಕರ ಜೀವನಾನುಭವ ಬದುಕಿನ ಪಾಠವಾಗಿದೆ.ಹೀಗಾಗಿ ವಿದ್ಯಾರ್ಥಿಗಳು ಅನುಭವಗಳಿಂದ ಬದುಕನ್ನು ಗೆಲ್ಲಬೇಕಿದೆ ಗೌರವ ವಿನಯ ನಿಯತ್ತು ದಾರಿದೀಪವಾಗಲಿದೆ. ಸಾಧನೆ ಸುಲಭದ ಮಾತಲ್ಲ.ಕೇವಲ ಪ್ರತಿಭೆಯಿಂದ ಮಾತ್ರ ಯಶಸ್ಸು ಕಾಣಲಾಗದು.ಕಠಿಣ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ. .ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಪ್ರಯತ್ನದ ಮೂಲಕ ಬೆಳೆಯಬೇಕು.ಸಾರ್ಥಕತೆಯ ಸಂತ್ರಪ್ತಿ ದೊರೆಯಬೇಕಾದರೆ ಸಾಧನೆಯ ಬದುಕು ನಮ್ಮದಾಗಬೇಕು ಎಂದು ಧರ್ಮಸ್ಥಳ ಮಂಜುನಾಥೇಶ್ವರ ಆರ್ಯುವೇದ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗರಾಜ ಪೂಜಾರಿ ಹೇಳಿದರು ಅವರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ಬೈಂದೂರು ಇದರ ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ವತ್ತಿನೆಣೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ,ಜಿ.ಪಂ ಮಾಜಿ ಸದಸ್ಯ ಮದನ್ ಕುಮಾರ್ ಉಪ್ಪುಂದ,ಸಹಕಾರಿಯ ಹಿರಿಯ ಸದಸ್ಯ ಜಗನ್ನಾಥ ಶೆಟ್ಟಿ,ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ,ನಿರ್ದೇಶಕರಾದ ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ,ರಾಮಕೃಷ್ಣ ಖಾರ್ವಿ, ಮಂಜು ಪೂಜಾರಿ, ಮಂಜುನಾಥ ಪೂಜಾರಿ,ಪ್ರಶಾಂತ ಪೂಜಾರಿ, ಪುಟ್ಟ ಎಮ್.ಬಿಲ್ಲವ,ನಾಗರತ್ನ ,ಬೇಬಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಾವಣ್ಯದ ಹಿರಿಯ ರಂಗ ಕಲಾವಿದ ಗಣೇಶ ಕಾರಂತ ಬೈಂದೂರು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಗಣೇಶ ಪೂಜಾರಿ ಯವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ರಾಜ್ಯ ಮಟ್ಟದಲ್ಲಿ ಸಾಧನೆಗೈದ 7 ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು ಹಾಗೂ ಸಂಘದ ಅರ್ಹ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಹಾಗೂ ಅನಾರೋಗ್ಯ ಪೀಡಿತ ಸದಸ್ಯರಿಗೆ ಸಹಾಯಧನ ವಿತರಿಸಲಾಯಿತು.
ಸಂಘದ ಅಧ್ಯಕ್ಷರಾದ ಎಸ್.ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಖಾಧಿಕಾರಿ ಸಂತೋಷ ಸಮ್ಮಾನ ಪತ್ರ ವಾಚಿಸಿದರು ಹಾಗೂ ರಾಘವೇಂದ್ರ ಪೂಜಾರಿ ವಿದ್ಯಾರ್ಥಿವೇತನದ ಪಟ್ಟಿ ವಾಚಿಸಿದರು.
ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ.ಸಂಘದ ಉಪಾಧ್ಯಕ್ಷ ವಿನಾಯಕ ರಾವ್ ವಂದಿಸಿದರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಶಶಾಂಕ್ ಬೈಂದೂರು