ಬೈಂದೂರು; ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ,ಬೈಂದೂರು-ಶಿರೂರು ಘಟಕ,ಜಿ. ಶಂಕರ ಫ್ಯಾಮಿಲಿ ಟ್ರಸ್ಟ್ (ಲಿ.) ಅಂಬಲಪಾಡಿ ಉಡುಪಿ, ಸೇವಾ ಸಂಗಮ ಶಿಶುಮಂದಿರ ಬೈಂದೂರು ಇವರ ಸಹಯೋಗದೊಂದಿಗೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪೂರ್ವಭಾವಿಯಾಗಿ ವತ್ತಿನೆಣೆ ಗುರು ರಾಘವೇಂದ್ರ ಸ್ವಾಮಿ ಮಠದ ಆವರಣದ ಸ್ವಚ್ಛತಾ ಕಾರ್ಯಕ್ರಮ ರವಿವಾರ ನಡೆಯಿತು.
ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷ ಹರೀಶ್ ಮಯ್ಯಾಡಿ,ನಿಕಟಪೂರ್ವಾಧ್ಯಕ್ಷ ಸೋಮಶೇಖರ ಕಸ್ಟಂ,ರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಮಂಜುನಾಥ ಶೆಟ್ಟಿ,ಮೊಗವೀರ ಸಂಘಟನೆಯ ಪೂರ್ವಾಧ್ಯಕ್ಷರು,ಸೇವಾ ಸಂಗಮ ಶಿಶುಮದಿರದ ಸದಸ್ಯರು ಹಾಗೂ ವಿವಿಧ ಸಂಘದ ಸಂಸ್ಥೆಗಳ ಸದಸ್ಯರು ಹಾಜರಿದ್ದರು.
