ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.)ನಾವುಂದ ಇದರ ವತಿಯಿಂದ ಗಿಡ ವಿತರಣೆ,ಕೃಷಿ ಮಾಹಿತಿ ಮತ್ತು ಪ್ರಗತಿಪರ ಕೃಷಿಕರಿಗೆ ಸಮ್ಮಾನ ಕಾರ್ಯಕ್ರಮ ಹೇರೂರು ಶಾಖಾ ವಠಾರದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಿಭಾಗದ ಸಹಾಯಕ ಉಪ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೋಬೋ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಬ್ದಾರಿ,ಹಿರಿಯರು ಪರಿಸರದ ಜೊತೆ ಅನ್ಯೋನ್ಯತೆ ಇರುವ ಕಾರಣ ಸಮತೋಲನ ಕಾಯ್ದುಕೊಂಡಿದ್ದುರು.ಅಭಿವೃದ್ದಿ ಅನಿವಾರ್ಯ ಆದರೆ ಅಭಿವೃದ್ದಿಯ ಜೊತೆಗೆ ಪರಿಸರ ನಿಷ್ಕಾಳಜಿಯಾಗುತ್ತಿರುವುದು ಕಳವಳಕಾರಿಯಾಗಿದೆ.ಪರಿಸರ ಸಂರಕ್ಷಣೆಯಿಂದ ಮಾತ್ರ ಹವಾಮಾನ ವೈಪರೀತ್ಯ ನಿಯಂತ್ರಣ ಸಾಧ್ಯ ಎಂದರು.

ಅರಣ್ಯ ಇಲಾಖೆ ಮಾಹಿತಿ ನೀಡಿದ ಅರಣ್ಯ ಸಂಚಾರ ದಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡಾ 42 ರಷ್ಟಿದ ಅರಣ್ಯ ಪ್ರಸ್ತುತ 22.ಶೇಕಡಾ ಇಳಿದಿದೆ.ಸರಕಾರ ಅರಣ್ಯ ವೃದ್ದಿಗಾಗಿ ಹಲವು ಯೋಜನೆಗಳನ್ನು ಸಾರ್ವಜನಿಕರಿಗೆ ನೀಡಿದೆ.ಸಾಮಾಜಿಕ ಪರಿಸರ ಕಾಳಜಿ ಜೊತೆಗೆ ಜೈವಿಕ ಪರಿಸರ ಕೊಂಡಿಯನ್ನು ಕಾಪಾಡಿಕೊಳ್ಳಬೇಕು,ಮನುಷ್ಯನಿಂದ ಹಿಡಿದು ಕ್ರಿಮಿ,ಕೀಟ,ಗಿಡ ಮರ ಎಲ್ಲದಕ್ಕೂ ಕೂಡ ಒಂದಕ್ಕೊಂದು ಸಂಬಂಧವಿದೆ.ಒಂದು ಮರ ಕಡಿದರೆ ಹತ್ತು ಮರಗಳನ್ನು ನೆಡುವ ಇಚ್ಚಾಶಕ್ತಿ ನಮ್ಮಲ್ಲಿರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಹೇರೂರು ಗ್ರಾ.ಪಂ ಅಧ್ಯಕ್ಷ ಸುರೇಶ್ ನಾಯ್ಕ,ಬೈಂದೂರು ವಲಯ ಅರಣ್ಯಾಧಿಕಾರಿ ಸಿದ್ದೇಶ್,ಚಂದ್ರಶೇಖರ ಶೆಟ್ಟಿ,ನಾರಾಯಣ ಶೆಟ್ಟಿ,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ,ಮಾಜಿ ತಾ.ಪಂ ಸದಸ್ಯ ಜಗದೀಶ ಪೂಜಾರಿ,ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಶಿವರಾಮ ಪೂಜಾರಿ ಯಡ್ತರೆ,ನಿರ್ದೇಶಕರಾದ ಎಂ.ವಿನಾಯಕ ರಾವ್,ವಾಸು ಪೂಜಾರಿ,ಬೋಜ ನಾಯ್ಕ,ಜಗದೀಶ ಪಿ.ಪೂಜಾರಿ,ಬಿ.ಎಚ್.ಅಬ್ದುಲ್ ರಹಿಮಾನ್,ರಾಮಕೃಷ್ಣ ಖಾರ್ವಿ,ಪ್ರಕಾಶ ದೇವಾಡಿಗ,ನಾಗಮ್ಮ,ಸರೋಜ ಆರ್,ಗಾಣಿಗ ಮೊದಲಾದವರು ಹಾಜರಿದ್ದರು.ಈ ಸಂದರ್ಭದಲ್ಲಿ ಎಂಟು ಪ್ರಗತಿಪರ ಕೃಷಿಕರನ್ನು ಸಮ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಎಸ್.ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.ಉಪಾಧ್ಯಕ್ಷ ಎಮ್.ಚಂದ್ರಶೀಲ ಶೆಟ್ಟಿ ವಂದಿಸಿದರು.

News/pic: Giri shiruru

 

 

Leave a Reply

Your email address will not be published.

9 − two =