ಶಿರೂರು: ನೆರೆಹಾವಳಿಯಿಂದ ಅರವತ್ತಕ್ಕೂ ಅಧಿಕ ನಾಡದೋಣಿ ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಬೇಟಿ ನೀಡಿದರು.ಶಿಥಿಲಗೊಂಡಿರುವ ದೋಣಿಗಳನ್ನು ವೀಕ್ಷಿಸಿದ ಅವರು ಬಳಿಕ ಮಾತನಾಡಿ ನೆರೆ ಸಂಭವಿಸಿದ ದಿನ ಶಿರೂರಿನ ಅನೇಕ ಕಡೆ ಬೇಟಿ ನೀಡಿದ್ದೇನೆ.ಮೀನುಗಾರಿಕೆಯನ್ನು ನಂಬಿಕೊಂಡಿರುವ ಮೀನುಗಾರರು ಕೂಡ ನೆರೆ ಹಾವಳಿಯಿಂದ ಅಪಾರ ನಷ್ಟ ಅನುಭವಿಸಿದ್ದಾರೆ.ಅನೇಕ ದೋಣಿಗಳು ಹಾನಿಗೀಡಾಗಿದೆ.ಈಗಾಗಲೆ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ.ಪ್ರಾಕ್ರತಿಕ ವಿಕೋಪ ಅನುದಾನ ಸೇರಿದಂತೆ ಸರಕಾರದಿಂದ ಅವಕಾಶವಿರುವ ಗರಿಷ್ಡ ಸಹಕಾರ ನೀಡುವ ಪ್ರಯತ್ನದ ಜೊತೆಗೆ ಮೀನುಗಾರರ ಸಮಸ್ಯೆಗೆ ಜಿಲ್ಲಾಡಳಿತ ಸದಾ ಸಹಕರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಾಜು,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ,ಶಿರೂರು ಗ್ರಾಮ ಲೆಕ್ಕಾಧಿಕಾರಿ ಸತೀಶ ಹೋಬಳಿದಾರ್,ಪ್ರಕಾಶ್ ರಾಥೋಡ್,ಉಪ್ಪುಂದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ,ಗ್ರಾ.ಪಂ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ ಕರಾವಳಿ,ಮಹ್ಮದ್ ಗೌಸ್,ತುಳಸಿದಾಸ್ ಮೊಗೇರ್ ಮೊದಲಾದವರು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು