Month: September 2025

ಸೆ.29 ರಿಂದ ಅ.01 ರ ವರೆಗೆ ಬೈಂದೂರು ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನದಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾರಂಭ

ಬೈಂದೂರು: ಬೈಂದೂರು ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನದಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾರಂಭ ಸೆ.29 ರಿಂದ ಅ.01 ರ ವರೆಗೆ ನಡೆಯಲಿದೆ. ಸೆ.29 ರಂದು ಬೆಳಿಗ್ಗೆ ಶಾರದಾ ದೇವಿಯ ಬಿಂಬ ಪ್ರತಿಷ್ಠಾಪನೆ,ದುರ್ಗಾಹೋಮ,ಅಕ್ಷರ ಅಭ್ಯಾಸ ಸರ್ವ ಸೇವಾ…

ಶಿರೂರು; ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸೆ.22 ರಿಂದ ಅ.02ರ ವರೆಗೆ ನವರಾತ್ರಿ, ವಿಜಯದಶಮಿ ಉತ್ಸವ

ಶಿರೂರು; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನವರಾತ್ರಿ, ವಿಜಯದಶಮಿ ಉತ್ಸವ ಸೆ.22 ರಿಂದ ಅ.02 ರ ವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ದೇವಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರತಿದಿನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅ.02ರಂದು…

ಶಿರೂರು; ಸೆ.22 ರಂದು ಹೊಸ್ತು ಆಚರಣೆ, ಶಿರೂರು ರೈತ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾ ಸಂಭ್ರಮ.

ಶಿರೂರು: ರೈತ ಸಂಘ ಶಿರೂರು ಇದರ ವತಿಯಿಂದ ಸೆ.22ರಂದು ಹೊಸ್ತು ಹಬ್ಬ ಆಚರಣೆ ಪ್ರಯುಕ್ತ ಕರಾವಳಿಯ ಸೋಡಿಬೆಟ್ಟಿನಲ್ಲಿ ಗ್ರಾಮೀಣ ಸಾಂಪ್ರದಾಯಿಕ ಕ್ರೀಡಾ ಸಂಭ್ರಮ ನಡೆಯಲಿದೆ.ಹೊಸ್ತು ಹಬ್ಬ ಗ್ರಾಮೀಣ ಸೊಗಡಿನ ಆಚರಣೆಯಾಗಿದ್ದು ನವರಾತ್ರಿ ತಿಂಗಳಲ್ಲಿ ಆಚರಿಸಲಾಗುತ್ತದೆ.ಕರಾವಳಿ ಭಾಗದಲ್ಲಿ ಮರೆಯಾಗುತ್ತಿರುವ ಕ್ರೀಡೆಗಳನ್ನು ನೆನಪಿಸುವ ಜೊತೆಗೆ…

ಮಾನಸ ಮಹಿಳಾ ಮಂಡಲ ಆಲಂದೂರು ನೂತನ ಅಧ್ಯಕ್ಷರಾಗಿ ನೀತಾ ಜಿ.ಮಾಕೋಡಿ  ಹಾಗೂ ಕಾರ್ಯದರ್ಶಿಯಾಗಿ ಪ್ರವೀಣ ಕುಮಾರಿ ಶೆಟ್ಟಿ ಆಯ್ಕೆ

ಶಿರೂರು: ಮಾನಸ ಮಹಿಳಾ ಮಂಡಲ ಆಲಂದೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಸ.ಹಿ.ಪ್ರಾ.ಶಾಲೆ ಆಲಂದೂರಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ನೀತಾ ಜಿ.ಮಾಕೋಡಿ  ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಗೀತಾ ಸತೀಶ್ ಕೊಠಾರಿ,ಅಕ್ಷತಾ ಕೇಸ್ನಿ,ದಿವ್ಯ ಚಂದ್ರ ಹಣಬ,ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಕುಮಾರಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ  ಶಾರದಾ…

ಮಾನಸ ಮಿತ್ರ ಮಂಡಳಿ ಆಲಂದೂರು ದಸರಾ ಕ್ರೀಡಾಕೂಟ ಉದ್ಘಾಟನೆ

ಶಿರೂರು: ಮಾನಸ ಮಿತ್ರ ಮಂಡಳಿ ಆಲಂದೂರು ಇದರ 22ನೇ ವರ್ಷದ ಶಾರದೋತ್ಸವದ ಪ್ರಯುಕ್ತ ದಸರಾ ಕ್ರೀಡಾಕೂಟ ಆಲಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಮಾನಸ ಮಿತ್ರ ಮಂಡಳಿ ಅಧ್ಯಕ್ಷ ರಂಜಿತ್ ಗಾಣಿಗ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ…

ಆರ್‍ಮಕ್ಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಶಿರೂರು,ವಾರ್ಷಿಕ ಸಾಮಾನ್ಯ ಸಭೆ ಶೇ.20% ಡಿವಿಡೆಂಡ್ ಘೋಷಣೆ

ಶಿರೂರು: ಆರ್‍ಮಕ್ಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಶಿರೂರು ಇದರ 2024 – 25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ವಠಾರದಲ್ಲಿ ನಡೆಯಿತು.ಒಕ್ಕೂಟದ ವಿಸ್ತರಣಾಧಿಕಾರಿ ರಾಜಾರಾಮ್  ಮಾತನಾಡಿ ಶುದ್ದ ಹಾಲಿನ ಉತ್ಪಾದನೆ ಹಾಗೂ ಜಾನುವಾರುಗಳಿಗೆ ಲವಣ ಮಿಶ್ರಣದ ಬಳಕೆಯ…

ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ನಿ ಬೈಂದೂರು ವಾರ್ಷಿಕ ಮಹಾಸಭೆ, ರೂ.61.67 ಲಕ್ಷ ಲಾಭ,ಶೇ.13% ಡಿವಿಡೆಂಡ್ ಘೋಷಣೆ

ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಕಳೆದ ಸಾಲಿನಲ್ಲಿ ರೂಪಾಯಿ 379.10 ಕೋಟಿ ವ್ಯವಹಾರ ನಡೆಸಿ ರೂಪಾಯಿ 61.67 ಲಕ್ಷ ನಿವ್ಹಳ ಲಾಭ ಗಳಿಸಿದೆ ಹಾಗೂ ಸಂಘದ ಸದಸ್ಯರಿಗೆ ಶೇ.13% ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ…

ಯಡ್ತರೆ ಗ್ರಾಮದ ಕೊಸಳ್ಳಿ, ಕುಡಿದ ಮತ್ತಿನಲ್ಲಿ ಜಗಳ, ಕೊಲೆಯಲ್ಲಿ ಅಂತ್ಯ

ಬೈಂದೂರು; ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ನಡೆದಿದೆ. ಬಿನು (45) ಕೊಲೆಯಾದ ಕಾರ್ಮಿಕನಾಗಿದ್ದಾನೆ. ಇಲ್ಲಿನ ಥೋಮಸ್ ಕುಟ್ಟಿ ಎನ್ನುವವರ ತೋಟದಲ್ಲಿ ಕೇರಳ ಮೂಲದ ಬಿನು ಹಾಗೂ ಉದಯ್ ಎನ್ನುವವರು ಎರಡು ವರ್ಷದಿಂದ ರಬ್ವರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.ವಿಪರೀತ ಕುಡುಕರಾದ…

ಬೈಂದೂರು ಪಟ್ಟಣ ಪಂಚಾಯತ್ ಬುಗಿಲೆದ್ದ ರೈತರ ಆಕ್ರೋಶ, ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡುವಂತೆ ಬೈಂದೂರು ರೈತ ಸಂಘದ ವತಿಯಿಂದ ಬ್ರಹತ್ ಪ್ರತಿಭಟನೆ

ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿರುವುದರಿಂದ ಕೃಷಿಕರು ಪ್ರತಿದಿನ ಪರದಾಡುವಂತಾಗಿದೆ.ಹೀಗಾಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತಸಂಘದ ನೇತ್ರತ್ವದಲ್ಲಿ ಶುಕ್ರವಾರ ಪಟ್ಟಣ ಪಂಚಾಯತ್ ಎದುರು ಬ್ರಹತ್ ಪ್ರತಿಭಟನೆ ನಡೆಸಲಾಯಿತು.…

ಕೋಟೆಮನೆ ಶ್ರೀ ದುಗಾಂಬಿಕಾ ದೇವಸ್ಥಾನ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರೂರು; ಶ್ರೀ ದುಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ದಸರಾ ಉತ್ಸವವು ಸೆಪ್ಟೆಂಬರ್ 22 ರಿಂದ  ಅಕ್ಟೋಬರ್ 02 ರವರೆಗೆ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ದೇವಳದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಸದಸ್ಯರು ಹಾಗೂ…