ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿರುವುದರಿಂದ ಕೃಷಿಕರು ಪ್ರತಿದಿನ ಪರದಾಡುವಂತಾಗಿದೆ.ಹೀಗಾಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತಸಂಘದ ನೇತ್ರತ್ವದಲ್ಲಿ ಶುಕ್ರವಾರ ಪಟ್ಟಣ ಪಂಚಾಯತ್ ಎದುರು ಬ್ರಹತ್ ಪ್ರತಿಭಟನೆ ನಡೆಸಲಾಯಿತು. ಬೈಂದೂರು ಪಟ್ಟಣ ಪಂಚಾಯತ್ ಎದುರುಗಡೆಯಿಂದ ಸಾವಿರಾರು ರೈತರು ಜಾಥಾದ ಮೂಲಕ ತಾಲೂಕು ಆಡಳಿತ ಕಛೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಬೈಂದೂರು ವ್ಯಾಪ್ತಿಯ ಸುತ್ತ ಮುತ್ತ ಹತ್ತಾರು ಕುಗ್ರಾಮಗಳಿವೆ.ಕೃಷಿಯೆ ಇಲ್ಲಿನ ಜನರ ಜೀವನಾಧಾರ.ಅಭಿವೃದ್ದಿಯ ಹೆಸರಿನಲ್ಲಿ ಪ ಪಂಚಾಯತ್ ವ್ಯಾಪ್ತಿಗೆ ಈ ಹಳ್ಳಿಗಳನ್ನು ಸೇರಿಸಿರುವುದರಿಂದ ಅಲ್ಲಿನ ಜನರ ಪರಿಸ್ಥಿತಿ ಬರಡು ಭೂಮಿಯಲ್ಲಿದ್ದಾಂತಾಗಿದೆ.23 ಕೀ ಮೀ ವ್ಯಾಪ್ತಿ.ಬಹುತೇಕ ಭಾಗ ಅರಣ್ಯ ವ್ಯಾಪ್ತಿ ರೈತರು ಸಣ್ಣ ಪುಟ್ಟ ಕೆಲಸಕ್ಕೂ ಉಡುಪಿಗೆ ಅಲೆಯಬೇಕಾದ ಪರಿಸ್ಥಿತಿ.ಅಕ್ರಮ ಸಕ್ರಮ ಗ್ರಾಮೀಣ ಕ್ರಪಾಂಗ ಸೌಲಭ್ಯ ಕೂಡ ದೊರೆಯುತ್ತಿಲ್ಲ.ಈಗಾಗಲೆ ಸಾವಿರಾರು ರೈತರಿಗೆ ಸಮಸ್ಯೆ ಆಗುವ ಈ ನಿದಾ೯ರದಿಂದ ಸರಕಾರ ಜಿಲ್ಲಾಡಳಿತ ಸರಿಪಡಿಸಬೇಕೆಂದು ಹಲವು ಬಾರಿ ಮನವಿ ನೀಡಿದರು ಇಲಾಖೆ ಸ್ಪಂಧಿಸಿಲ್ಲ. ಮಾತ್ರವಲ್ಲದೆ ಚುನಾವಣೆ ಮೀಸಲಾತಿ ಪ್ರಕ್ರಿಯೆ ಆರಂಭಿಸಿದೆ.ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ನ್ಯಾಯ ದೊರೆಯಬೇಕೆಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ ಎಂದರು.

ಗುರುವಾರದ ಗಡುವು ;  ಜಿಲ್ಲಾಡಳಿತ ಈ ಸಮಸ್ಯೆಗೆ ಗುರುವಾರದ ಒಳಗೆ ಸ್ಪಷ್ಟ ಮಾಹಿತಿ ನೀಡಿ ಸರಿಪಡಿಸದಿದ್ದರೆ. ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಎದುರು ಸಹಸ್ರಾರು ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸುತ್ತೆವೆ ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು  ಅಮರಣಾಂತ ಪ್ರತಿಭಟನೆ ನಡೆಸುತ್ತೆವೆ ಎಂದರು.

ಜಿಲ್ಲಾಧಿಕಾರಿ ಆಗಮನಕ್ಕೆ ಆಗ್ರಹ;  ಪ್ರತಿಭಟನೆ ನಿರತ ರೈತರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಪ್ರತಿಭಟನೆ ಪಟ್ಟು ಹಿಡಿದರು.ಆದರೆ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿದ್ದು ಸಹಾಯಕ ಕಮಿಷನರ್ ಕೂಡ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ತಾಲೂಕು ಆಡಳಿತ ಕಛೇರಿ ಒಳನುಗ್ಗಲು ಮುಂದಾದಾಗ  ಪ್ರತಿಭಟನ ಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡೆಯಬೇಕಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಪರವಾಗಿ ಕುಂದಾಪುರ ತಹಶೀಲ್ದಾರ ಪ್ರದೀಪ ಕುರ್ಡೆಕರ್ ಮನವಿ ಸ್ವೀಕರಿಸಿದರು ಹಾಗೂ ಸರಕಾರಕ್ಕೆ ಈ ಕುರಿತು ವರದಿ ನೀಡುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ನಾಯಕರು ಮುಂದಾಳುಗಳು ಭಾಗವಿಸಿದ್ದರು. ಯಡ್ತರೆ ಗ್ರಾ.ಪಂ ಮಾಜಿ ಸದಸ್ಯ ಗಣೇಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ವೀರಭದ್ರ ಗಾಣಿಗ ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

 

 

Leave a Reply

Your email address will not be published. Required fields are marked *

3 + twelve =