ಬೈಂದೂರು: ಬೈಂದೂರು ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನದಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾರಂಭ ಸೆ.29 ರಿಂದ ಅ.01 ರ ವರೆಗೆ ನಡೆಯಲಿದೆ.

ಸೆ.29 ರಂದು ಬೆಳಿಗ್ಗೆ ಶಾರದಾ ದೇವಿಯ ಬಿಂಬ ಪ್ರತಿಷ್ಠಾಪನೆ,ದುರ್ಗಾಹೋಮ,ಅಕ್ಷರ ಅಭ್ಯಾಸ ಸರ್ವ ಸೇವಾ ಪೂಜೆ,ಮಹಾಪೂಜೆ,ಮದ್ಯಾಹ್ನ ಪೂಜೆ,ರಾತ್ರಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮ.ಸಂಜೆ ಭಜನಾ ಕಾರ್ಯಕ್ರಮ.ಸಭಾ ಕಾರ್ಯಕ್ರಮ,ಗಣ್ಯರಿಗೆ ಸಮ್ಮಾನ,ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ,ರಾತ್ರಿ 7 ಗಂಟೆಗೆ ಸುರಭಿ ಬೈಂದೂರು ಇಲ್ಲಿನ ವಿದ್ಯಾರ್ಥಿಗಳಿಂದ ಗಾನ-ನೃತ್ಯ ವೈಭವ, ರಿದಂ ಡ್ಯಾನ್ಸ್ ಗ್ರೂಪ್ ಮಕ್ಕಿಗದ್ದೆ ತಗ್ಗರ್ಸೆ ಇವರಿಂದ ರಿದಂ ನೃತ್ಯ ವೈಭವ ಹಾಗೂ ರಾತ್ರಿ 9;30 ಕ್ಕೆ ವಿಜಯ ಕುಮಾರ್ ಕೋಡಿಯಲ್‌ಬೈಲ್ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.30ರಂದು ರಂದು ಬೆಳಿಗ್ಗೆ ಸರಸ್ವತಿ ಹೋಮ,ಪೂಜಾ ಕಾರ್ಯಕ್ರಮಗಳು.ಮದ್ಯಾಹ್ನ ಪೂಜೆ ನಡೆಯಲಿದೆ.ಮದ್ಯಾಹ್ನ ವಿವಿಧ ಸ್ಪರ್ಧಾ ಕಾರ್ಯಕ್ರಮ.ಸಂಜೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ಹಾಗೂ ರಸಸಂಜೆ ಕಾರ್ಯಕ್ರಮ ನಡೆಯಲಿದೆ.ರಾತ್ರಿ 10ಗಂಟೆಗೆ ಅರೆಹೊಳೆ ಪ್ರತಿಷ್ಠಾನ ಮಂಗಳೂರು ನಂದಗೋಕುಲ ಕಲಾವಿದರಿಂದ ಮಂದಾರ್ತಿ ಮಾದೇವಿ ನೃತ್ಯ ರೂಪಕ ಮತ್ತು ನೃತ್ಯ ವೈಭವ ನಡೆಯಲಿದೆ.

ಅ.01 ರಂದು ಬೆಳಿಗ್ಗೆ ಚಂಡಿಕಾ ಹೋಮ,ವಿವಿಧ ಪೂಜಾ ವಿಧಿ ವಿಧಾನಗಳು,ಮದ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಫಲಾವಳಿಗಳ ಏಲಂ ಬಳಿಕ ವರ್ಣರಂಜಿತ ಪುರಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

 

Leave a Reply

Your email address will not be published. Required fields are marked *

11 − 3 =