ಬೈಂದೂರು; ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ನಡೆದಿದೆ. ಬಿನು (45) ಕೊಲೆಯಾದ ಕಾರ್ಮಿಕನಾಗಿದ್ದಾನೆ. ಇಲ್ಲಿನ ಥೋಮಸ್ ಕುಟ್ಟಿ ಎನ್ನುವವರ ತೋಟದಲ್ಲಿ ಕೇರಳ ಮೂಲದ ಬಿನು ಹಾಗೂ ಉದಯ್ ಎನ್ನುವವರು ಎರಡು ವರ್ಷದಿಂದ ರಬ್ವರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.ವಿಪರೀತ ಕುಡುಕರಾದ ಇವರು ಹೆಚ್ಚಿನದಿನ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು.ಶನಿವಾರ ರಾತ್ರಿ ಒಂದು ಗಂಟೆ ಹೊತ್ತಿಗೆ ಇಬ್ಬರ ನಡುವೆ ಗಲಾಟೆ ತಾರಕಕ್ಕೇರಿ ಉದಯ್ ರಬ್ಬರ್ ಟ್ಯಾಪಿಂಗ್ ಚೂರಿಯಿಂದ ಬಿನುಗೆ ಚುಚ್ಚಿದ್ದು ಗಂಭೀರ ಗಾಯಗೊಂಡ ಈತ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.ಆರೋಪಿ ಉದಯ ಮೇಲೆ ಕೂಡ ಹಲ್ಲೆಯಾಗಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿ ಉದಯ್

ಗ್ರಾಮೀಣ ಭಾಗದಲ್ಲಿ ನಡೆದ ಕೊಲೆ ಪ್ರಕರಣ ದಿಗ್ಬ್ರಮೆ ಮೂಡಿಸಿದ್ದು ಘಟನಾ ಸ್ಥಳಕ್ಕೆ ಕುಂದಾಪುರ ಡಿ ವೈ ಎಸ್ ಪಿ. ಎಚ್.ಡಿ ಕುಲಕರ್ಣಿ ಮತ್ತು ಆರಕ್ಷಕ ಅಧಿಕಾರಿಗಳು ಆಗಮಿದ್ದು ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.ಸ್ನೇಹಿತರಾಗಿ ಕೆಲಸಕ್ಕೆ ಬಂದು ಕೊಲೆಯ ಮೂಲಕ ಅಂತ್ಯವಾಗಿದ್ದು ದುರಂತವೆ ಸರಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *

twelve + 7 =