ಶಿರೂರು: ಮಾನಸ ಮಿತ್ರ ಮಂಡಳಿ ಆಲಂದೂರು ಇದರ 22ನೇ ವರ್ಷದ ಶಾರದೋತ್ಸವದ ಪ್ರಯುಕ್ತ ದಸರಾ ಕ್ರೀಡಾಕೂಟ ಆಲಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.

ಮಾನಸ ಮಿತ್ರ ಮಂಡಳಿ ಅಧ್ಯಕ್ಷ ರಂಜಿತ್ ಗಾಣಿಗ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಯೆನ್ನುವುದು ಕೇವಲ ಮನರಂಜನೆಗಷ್ಟೆ ಸೀಮಿತವಲ್ಲ ಬದಲಾಗಿ ಯುವಕರ ಕ್ರಿಯಾಶೀಲತೆಯನ್ನು ಪ್ರತಿನಿಧಿಸುವ ಅವಕಾಶ ನೀಡುತ್ತದೆ. ಮಾತ್ರವಲ್ಲದೆ ಕ್ರೀಡೆಯಿಂದ ಯುವಕರನ್ನು ಒಗ್ಗೂಡಿಸಲು ಸಾಧ್ಯ ಎಂದರು.

ಕೆರಾಡಿ ವರಸಿದ್ದಿವಿನಾಯಕ ಕಾಲೇಜಿನ ಆಡಳಿತ ನಿರ್ದೇಶಕ ಮಂಜುನಾಥ ಆರ್.ಗಾಣಿಗ  ,ಶಿರೂರು ಜೆಸಿಐ ಅಧ್ಯಕ್ಷ ಜಯಂತ ಪೂಜಾರಿ, ಆಲಂದೂರು ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಅಶ್ವಿನಿ ಕೊಠಾರಿ ಉಪಸ್ಥಿತರಿದ್ದರು.

ಶಿಕ್ಷಕ ಶ್ರೀಕಾಂತ ಕಾಮತ್ ಸ್ವಾಗತಿಸಿದರು.ಶಿಕ್ಷಕ ಪ್ರಕಾಶ ಮಾಕೋಡಿ ಕಾರ್ಯಕ್ರಮ ನಿರೂಪಿಸಿದರು.ಸುರೇಶ ಮಾಕೋಡಿ ವಂದಿಸಿದರು.

 

 

 

 

Leave a Reply

Your email address will not be published. Required fields are marked *

7 + 8 =