Month: June 2025

ಬೈಂದೂರು,ಶಿರೂರು ಮುಂದುವರಿದ ಮಳೆ ಆರ್ಭಟ,ಜಲಾವೃತಗೊಂಡ ನ್ಯಾಯಾಲಯ ಸಂಕೀರ್ಣ,ಬೈಂದೂರಿನಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭ

ಬೈಂದೂರು: ಬೈಂದೂರು ತಾಲೂಕಿನಾದ್ಯಂತ ಮಳೆಯ ಅಬ್ಬರ ಅಧಿಕಗೊಂಡಿದ್ದು ಬಹುತೇಕ ಭಾಗ ಜಲಾವೃತಗೊಳ್ಳುವ ಜೊತೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.ಬೈಂದೂರು,ಕೊಲ್ಲೂರು,ತಗ್ಗರ್ಸೆ ರಸ್ತೆ ನೀರು ತುಂಬಿದ್ದು ಕೋರ್ಟ್ ಆವರಣ ಜಲಾವೃತಗೊಂಡಿದೆ.ನ್ಯಾಯಾಲಯ ಸಂಕೀರ್ಣಕ್ಕಾಗಿ ಬೈಂದೂರಿನಲ್ಲಿ 2 ಎಕರೆ ಜಾಗ ಮೀಸಲಿರಿಸಿದ್ದು ಈ ಜಾಗದಲ್ಲಿ ಶೀಘ್ರ ನ್ಯಾಯಾಲಯ…

ದೊಂಬೆ ಕಡಲ್ಕೊರೆತ ಪ್ರದೇಶಕ್ಕೆ ಅಧಿಕಾರಿಗಳ ಬೇಟಿ

ಬೈಂದೂರು; ಕಳೆದ ಹಲವು ದಿನಗಳಿಂದ ಮಳೆಯಿಂದಾಗಿ  ಪಡುವರಿ ಗ್ರಾಮದ ದೊಂಬೆ ಚೋಣುಮನೆ ಎಂಬಲ್ಲಿ ಕಡಲ್ಕೊರೆತ ಉಂಟಾಗುತ್ತಿದ್ದು ಸ್ಥಳಕ್ಕೆ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದ ಬಾರಿ ಜಿಲ್ಲಾಧಿಕಾರಿಗಳು ಈ ಭಾಗಕ್ಕೆ ಬೇಟಿ ನೀಡಿದ್ದರು ಸಹ…

ದೊಂಬೆ; ಗುಡ್ಡ ಕುಸಿದ ಪ್ರದೇಶಕ್ಕೆ ಅಧಿಕಾರಿಗಳ ಬೇಟಿ

ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ದೊಂಬೆ ಪುಂಡನಮನೆ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದ ಬಳಿ ಗುಡ್ಡ ಕುಸಿದ ಸ್ಥಳಕ್ಕೆ ಶುಕ್ರವಾರ ವಿವಿಧ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಭಾಗದಲ್ಲಿ ಗುಡ್ಡ ಕುಸಿದಿರುವ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿತ್ತು.ವರದಿಗೆ ಸ್ಪಂಧಿಸಿ ಬೇಟಿ ನೀಡಿದ…

ಶಿರೂರು: ಭೀಕರ ಮಳೆಗೆ ನದಿ ಪಾಲಾದ ಮೀನು ಸಾಕಣೆ ಘಟಕ

ಬೈಂದೂರು: ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಗೆ ಶಿರೂರಿನಲ್ಲಿ ಮೀನು ಸಾಕಣೆ ಘಟಕ ನದಿಪಾಲಾಗಿ ಮೂರು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.ಸಮುದ್ರ ಮಟ್ಟದಲ್ಲಿ ಇರುವ ತಗ್ಗು ಪ್ರದೇಶವಾದ ಕಳಿಹಿತ್ಲುವಿನಲ್ಲಿ ಅಪಾರ ಹಾನಿವುಂಟಾಗಿ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಕಳಿಹಿತ್ಲುವಿನಲ್ಲಿ ಹಾದು ಹೋಗುವ ಕುಂಬಾರ…

ಬೈಂದೂರು, ಶಿರೂರು ಕುಂಭದ್ರೋಣ ಮಳೆಯ ಅಬ್ಬರ,ಮನೆಗಳಿಗೆ ನುಗ್ಗಿದ ನೀರು,ಹೊಲಗದ್ದೆ ಜಲಾವೃತ

ಶಿರೂರು: ಬೈಂದೂರು ತಾಲೂಕಿನಾದ್ಯಂತ ಕುಂಭದ್ರೋಣ ಮಳೆಯ ಅಬ್ಬರದಿಂದಾಗಿ ಬಹುತೇಕ ಕಡೆ ಹೊಲ,ಗದ್ದೆಗಳು ಜಲಾವೃತಗೊಂಡಿದೆ.ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು ನದಿ,ತೊರೆಗಳು ತುಂಬಿ ಹರಿಯುತ್ತಿವೆ.ಶಿರೂರು ಗ್ರಾಮದ ಗುಮ್ಮನಾಡಿ ಎಂಬಲ್ಲಿ ಆರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.ಹೆದ್ದಾರಿ ಚರಂಡಿ ಅವ್ಯವಸ್ಥೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ.ಕಳೆದ…

ಬೈಂದೂರು: ಜಾಗ ಮಾರಾಟ ಮಾಡುವುದಾಗಿ 2 ಕೋಟಿ ರೂಪಾಯಿ ವಂಚನೆ

ಬೈಂದೂರು: ಜಾಗ ಮಾರಾಟ ಮಾಡಿಕೊಡುವುದಾಗಿ ನಂಬಿಸಿ 2 ಕೋಟಿ  ರೂಪಾಯಿ ವಂಚನೆ ನಡೆಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ.ಬೈಂದೂರು ತಗ್ಗರ್ಸೆ ಗ್ರಾಮದ ನಿವಾಸಿ ಸುಭಾಷ್ ಪೂಜಾರಿ ಗುತ್ತಿಗೆ ವ್ಯವಹಾರ ಮಾಡಿಕೊಂಡಿದ್ದು  ಇವರಿಗೆ ಯಡ್ತರೆ ಗ್ರಾಮದ ರೋಕಿ ಡಯಾಸ್ ಹಾಗೂ ತಗ್ಗರ್ಸೆ ಗ್ರಾಮದ ಮಾಜಿ…

ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಿಜೂರು ಶಾಲೆಗೆ ಪುಸ್ತಕ ವಿತರಣೆ

ಬೈಂದೂರು: ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯವನ್ನು ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ಒದಗಿಸಲಾಗುತ್ತದೆ. ಈ ಶಾಲೆಯನ್ನು ಶೈಕ್ಷಣಿಕವಾಗಿ ಭೌತಿಕವಾಗಿ ಅಭಿವೃದ್ಧಿ ಪಡಿಸಲು ಟ್ರಸ್ಟ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಡಾ…

ಬೈಂದೂರು : ಹೆದ್ದಾರಿ ಡಿವೈಡರ್ ಗೆ ಬಸ್ ಡಿಕ್ಕಿ ಪ್ರಯಾಣಿಕರು ಅಪಾಯದಿಂದ ಪಾರು

ಬೈಂದೂರು:ಶಿರೂರು ವತ್ತಿನೆಣೆ ಸಮೀಪದ ಗ್ರೀನ್ ವ್ಯಾಲಿ ಶಾಲೆಯ ಇಳಿಜಾರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ.ಎಸ್.ಆರ್.ಟಿಸಿ ಬಸ್ಸೊಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದೆ. ಡಿಕ್ಕಿಯ ಪರಿಣಾಮ ಬಸ್ಸಿನಲ್ಲಿದ್ದ…

ಬೈಂದೂರು,ಶಿರೂರಿನಲ್ಲಿ ಸಂಭ್ರಮ ಸಡಗರದ ಬಕ್ರೀದ್ ಹಬ್ಬ ಆಚರಣೆ

ಬೈಂದೂರು: ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ  ಬಕ್ರೀದ್ ಹಬ್ಬವನ್ನು ಬೈಂದೂರು,ನಾಗೂರು,ನಾವುಂದ, ಶಿರೂರು ಹಾಗೂ ಗಂಗೊಳ್ಳಿ ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಶನಿವಾರ ಮುಂಜಾನೆ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಜಾಮೀಯಾ ಮಸೀದಿ,ಹಡವಿನಕೋಣೆ ಅಬ್ದುಲ್ ತಲಾಹಿ…

ಬೈಂದೂರು; ಆಕ್ರಮ ಗೋ ಸಾಗಾಟ, 10 ಜಾನುವಾರು ವಶ, ಮೂವರು ಆರೋಪಿಗಳ ಬಂಧನ

ಬೈಂದೂರು: ಆಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನ ತಪಾಸಣೆ ನಡೆಸಿ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.ಗುರುವಾರ ಬೆಳಿಗ್ಗೆ 3:30 ರ ಹೊತ್ತಿಗೆ ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ಈಚರ್ ವಾಹನ ಹಾಗೂ ಅದರ ಬೆಂಗಾವಲು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳಾದ…

You missed