ಬೈಂದೂರು: ಜಾಗ ಮಾರಾಟ ಮಾಡಿಕೊಡುವುದಾಗಿ ನಂಬಿಸಿ 2 ಕೋಟಿ ರೂಪಾಯಿ ವಂಚನೆ ನಡೆಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ.ಬೈಂದೂರು ತಗ್ಗರ್ಸೆ ಗ್ರಾಮದ ನಿವಾಸಿ ಸುಭಾಷ್ ಪೂಜಾರಿ ಗುತ್ತಿಗೆ ವ್ಯವಹಾರ ಮಾಡಿಕೊಂಡಿದ್ದು ಇವರಿಗೆ ಯಡ್ತರೆ ಗ್ರಾಮದ ರೋಕಿ ಡಯಾಸ್ ಹಾಗೂ ತಗ್ಗರ್ಸೆ ಗ್ರಾಮದ ಮಾಜಿ ಜಿ.ಪಂ ಸದಸ್ಯ ಶಂಕರ ಪೂಜಾರಿ ಸೇರಿಕೊಂಡು 2.66 ಕೋಟಿ ರೂಪಾಯಿ ಕರಾರು ಮಾಡಿಕೊಂಡಿರುತ್ತಾರೆ.ಮುಂಗಡವಾಗಿ 1.81 ಕೋಟಿ ರೂಪಾಯಿ ಪಡೆದುಕೊಂಡಿದ್ದು ಕಳೆದ ಹಲವು ಸಮಯದಿಂದ ಜಾಗ ಮಾರಾಟ ಮಾಡಿಕೊಡದೆ ವಂಚಿಸಿರುವ ಜೊತೆಗೆ ಈ ಜಾಗದ ಮೇಲೆ ಸ್ಥಳೀಯ ಸಹಕಾರಿ ಸಂಘದಲ್ಲಿ 1 ಕೋಟಿ ರೂಪಾಯಿ ಸಾಲ ಪಡೆದುಕೊಂಡಿರುವುದಲ್ಲದೆ ಕರಾರಿನ ಪ್ರಕಾರ ಜಾಗ ಮಾರಾಟ ಮಾಡದೆ ವಂಚಿಸಿದ್ದಾರೆ.ಈ ಕುರಿತು ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.