ಬೈಂದೂರು: ಆಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನ ತಪಾಸಣೆ ನಡೆಸಿ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.ಗುರುವಾರ ಬೆಳಿಗ್ಗೆ 3:30 ರ ಹೊತ್ತಿಗೆ ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ಈಚರ್ ವಾಹನ ಹಾಗೂ ಅದರ ಬೆಂಗಾವಲು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳಾದ ಅಬ್ರಾರುಲ್ ಹಾಕ್ ಮೋಮಿನ್,ಮೊಹಮ್ಮದ್ ಭಟ್ಕಳ,ಮೊಹಮ್ಮದ್ ಅರೀಫ್ ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.