ಶಿರೂರು: ಬೈಂದೂರು ತಾಲೂಕಿನಾದ್ಯಂತ ಕುಂಭದ್ರೋಣ ಮಳೆಯ ಅಬ್ಬರದಿಂದಾಗಿ ಬಹುತೇಕ ಕಡೆ ಹೊಲ,ಗದ್ದೆಗಳು ಜಲಾವೃತಗೊಂಡಿದೆ.ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು ನದಿ,ತೊರೆಗಳು ತುಂಬಿ ಹರಿಯುತ್ತಿವೆ.ಶಿರೂರು ಗ್ರಾಮದ ಗುಮ್ಮನಾಡಿ ಎಂಬಲ್ಲಿ ಆರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.ಹೆದ್ದಾರಿ ಚರಂಡಿ ಅವ್ಯವಸ್ಥೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ.ಕಳೆದ ವರ್ಷವೂ ಕೂಡ ಈ ಭಾಗದಲ್ಲಿ ನೀರು ನುಗ್ಗಿರುವುದನ್ನು ನೆನಪಿಸಿಕೊಳ್ಳಬಹುವುದಾಗುದೆ.ಶಿರೂರು ಗ್ರಾಮದ ನಿರೋಡಿ ಬಳಿ ಹೊಲ,ಗದ್ದೆಗಳಿಗೆ ನೀರು ತುಂಬಿದ್ದು ಮನೆಗಳಿಗೆ ನೀರು ನುಗ್ಗುವ ಆತಂಕವಿದೆ.ಯಡ್ತರೆ ಗ್ರಾಮದ ಊದೂರು,ಕಡ್ಕೆ,ಆಲಂದೂರು ಮುಂತಾದ ಕಡೆ ತೋಟ,ಗದ್ದೆ,ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.ಸಂಜೆಯಾಗುತ್ತಿದ್ದಂತೆ ಮಳೆಯ ಅಬ್ಬರ ಅಧಿಕವಾಗಿದ್ದು ಇನ್ನಷ್ಟು ಆತಂಕ ಉಂಟು ಮಾಡುತ್ತಿದೆ.
ಸ್ಥಳಕ್ಕೆ ಬೈಂದೂರು ತಹಶಿಲ್ದಾರ ಭೀಮಸೇನ್ ಕುಲಕರ್ಣಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್,ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಆರ್ಮಕ್ಕಿ,ಉದಯ ಪೂಜಾರಿ ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು