ಕಳಿಹಿತ್ಲು ದೋಣಿ ಹಾನಿಗೊಳಗಾದ ಸ್ಥಳಗಳಿಗೆ ಮೀನುಗಾರಿಕಾ ಸಚಿವ ಎಸ್.ಅಂಗಾರ ಬೇಟಿ,ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೀನುಗಾರರಿಗೆ ಸೂಕ್ತ ನೆರವು ಇಲಾಖೆಯಿಂದ ನೀಡುವ ಪ್ರಯತ್ನ ಮಾಡುತ್ತೇನೆ;ಅಂಗಾರ
ಶಿರೂರು: ಶಿರೂರಿನಲ್ಲಿ ನೆರೆಹಾವಳಿಯಿಂದ ನಾಡದೋಣಿ ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೆ ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಬೇಟಿ ನೀಡಿದರು ಹಾನಿಗೊಳಗಾದ ದೋಣಿಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ವಿಪರೀತ ಮಳೆಯಿಂದ ಶಿರೂರಿನಲ್ಲಿ ಅರವತ್ತಕ್ಕೂ ಅಧಿಕ ದೋಣಿಗಳು ಹಾನಿಗೊಳಗಾಗಿದೆ.ಜೊತೆಗೆ ಬಲೆ…