ಬೈಂದೂರು: ವಿ.ಆರ್.ಎಲ್ ಸಮೂಹ ಸಂಸ್ಥೆಯಿಂದ ಶಿಕ್ಷಣ,ಉದ್ಯಮಿ,ಆರೋಗ್ಯ,ಪರಿಸರ ಕಾಳಜಿ ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ವಿಜಯರತ್ನ ಪ್ರಶಸ್ತಿ ಬೈಂದೂರು ಮೂಲದ ಉದ್ಯಮಿಗಳಾದ ಯು.ಬಿ ಶೆಟ್ಟಿ ಹಾಗೂ ಉದ್ಯಮಿ ಗೋವಿಂದ ಬಾಬು ಪೂಜಾರಿ ಯವರಿಗೆ ದೊರೆತಿದೆ.ನಾಡಿನ 42 ಸಾಧಕರಿಗೆ ಈ ಪ್ರಶಸ್ತಿ ದೊರೆತಿದ್ದು ಹಿರಿಯ ಉದ್ಯಮಿ ಯು.ಬಿ ಶೆಟ್ಟಿ ಯವರು ಯು.ಬಿ.ಎಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾಮಾಜಿಕ,ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು ಪ್ರಸ್ತುತ ಯು.ಬಿ.ಎಸ್ ಶಿಕ್ಷಣ ಸಂಸ್ಥೆ ಮೂಲಕ ಬೈಂದೂರು ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದ್ದಾರೆ.ಬಡ ಮಕ್ಕಳಿಗೆ ಉಚಿತ ಶಿಕ್ಷಣ,ಕ್ರೀಡೆ,ಕಲಾಕ್ಷೇತ್ರದಲ್ಲಿ ಪ್ರೋತ್ಸಾಹ ಸೇರಿದಂತೆ ಸಮಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡಿದ್ದಾರೆ.

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಅಧ್ಯಕ್ಷರಾಗಿರುವ ಗೋವಿಂದ ಬಾಬು ಪೂಜಾರಿ ಚೆಫ್‌ಟಾಕ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.ಸಾವಿರಾರು ಜನರಿಗೆ ಉದ್ಯೋಗ, 25 ಕ್ಕೂ ಅಧಿಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ,ಸಾವಿರಾರು ಆಸಕ್ತರಿಗೆ ನೆರವು ಸೇರಿದಂತೆ ಯುವ ಉದ್ಯಮಿಯಾಗಿ ಬೈಂದೂರು ಕ್ಷೇತ್ರದ ಜನಮನ್ನಣೆ ಪಡೆದ ಯುವ ನಾಯಕರಾಗಿದ್ದಾರೆ.ಧಾರ್ಮಿಕ,ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಇವರು ಕೊಡುಗೈ ದಾನಿಯಾಗಿದ್ದಾರೆ.ಬೈಂದೂರಿನ ಈರ್ವರ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿರುವುದು ಇನ್ನಷ್ಟು ಸಮಾಜಸೇವಗೆ ಪ್ರೇರಣೆ ನೀಡಿದಂತಾಗಿದೆ.

ವರದಿ/ಗಿರಿ ಶಿರೂರು

 

Leave a Reply

Your email address will not be published.

5 × 5 =