ಶಿರೂರು: ಶಿರೂರಿನಲ್ಲಿ ನೆರೆಹಾವಳಿಯಿಂದ ನಾಡದೋಣಿ ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೆ ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಬೇಟಿ ನೀಡಿದರು ಹಾನಿಗೊಳಗಾದ ದೋಣಿಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ವಿಪರೀತ ಮಳೆಯಿಂದ ಶಿರೂರಿನಲ್ಲಿ ಅರವತ್ತಕ್ಕೂ ಅಧಿಕ ದೋಣಿಗಳು ಹಾನಿಗೊಳಗಾಗಿದೆ.ಜೊತೆಗೆ ಬಲೆ ಹಾಗೂ ಇಂಜಿನ್ ಕೂಡ ಕಳೆದುಕೊಂಡಿದ್ದಾರೆ.ಸ್ವಕ್ಷೇತ್ರವಾದ ಸುಳ್ಯದಲ್ಲೂ ಕೂಡ ಮಳೆ ಹಾನಿ ಸಂಭವಿಸಿ ಅನೇಕ ಭಾಗಗಳಲ್ಲಿ ಅವಘಡ ಸಂಭವಿಸಿದ ಕಾರಣ ಶಿರೂರಿಗೆ ಬರಲು ವಿಳಂಭವಾಗಿದೆ.ಈಗಾಗಲೇ ಅಧಿಕಾರಿಗಳಿಂದ ಸಮಗ್ರ ವರದಿ ಪಡೆದಿದ್ದು ಪ್ರಾಕೃತಿಕ ವಿಕೋಪ ನಿಯಮದಡಿಯಲ್ಲಿ ಅತ್ಯಧಿಕ ಅನುದಾನ ನೀಡಲು ಸಾಧ್ಯವಿಲ್ಲದ ಕಾರಣ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೀನುಗಾರರಿಗೆ ಸೂಕ್ತ ನೆರವು ಇಲಾಖೆಯಿಂದ ನೀಡುವ ಪ್ರಯತ್ನ ಮಾಡುತ್ತೇನೆ.ಸೀಮೆಎಣ್ಣೆ ನಿಷೇಧ ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದೆ.ಕ್ಯಾಬಿನೆಟ್ ಮಾತುಕತೆ ಮೂಲಕ ಸಮರ್ಪಕ ನಿರ್ಧಾರ ಕೈಗೊಳ್ಳಲಾಗುವುದು.ಕೊಡೇರಿ ಬಂದರು ಸೇರಿದಂತೆ ಮೀನುಗಾರರ ಇತರ ಸಮಸ್ಯೆ ಕುರಿತು ಅಧಿಕಾರಿಗಳು ಮತ್ತು ಮೀನುಗಾರರ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ,ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ,ಕುಂದಾಪುರ ಸಹಾಯಕ ಕಮಿಷನರ್ ರಾಜು, ಮೀನುಗಾರಿಕ ಸಹಾಯಕ ನಿರ್ದೇಶಕ ಶಿವಕುಮಾರ್,ಮೀನುಗಾರಿಕ ಸಹಾಯಕ ನಿರ್ದೇಶಕಿ ಸುಮಲತಾ,ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ,ಉಪತಹಶೀಲ್ದಾರ ಭೀಮಪ್ಪ ಎಚ್.ಬಿಲ್ಲಾರ್,ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಶಿರೂರು, ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ರಾಥೋಡ್,ಉಪ್ಪುಂದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಮೀನುಗಾರ ಮುಖಂಡರಾದ ಜಗನ್ನಾಥ ಮೊಗವೀರ,ನವೀನ್‌ಚಂದ್ರ ಉಪ್ಪುಂದ,ನಾಗರಾಜ ಬಿ.ಎಚ್.ಪಿ,ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ,ರಾಣಿಬಲೆ ಮೀನುಗಾರರ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ,ಕಳಿಹಿತ್ಲು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅಜೀಜ್ ಕಳಿಹಿತ್ಲು,ಗ್ರಾ.ಪಂ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ ಕರಾವಳಿ,ಮಹ್ಮದ್ ಗೌಸ್,ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಬಾಬು ಮೊಗೇರ್ ಅಳ್ವೆಗದ್ದೆ,ಸುರೇಂದ್ರ ದೇವಾಡಿಗ ತುಳಸಿದಾಸ್ ಮೊಗೇರ್ ಮೊದಲಾದವರು ಹಾಜರಿದ್ದರು.
News/pic: Giri shiruru