ಶಿರೂರು: ವಿಧಾನಪರಿಷತ್ ಸದಸ್ಯರ ಅನುದಾನದಿಂದ ನಿರ್ಮಾಣಗೊಂಡಿರುವ ಶಿರೂರು ಕೆಳಪೇಟೆ ರಿಕ್ಷಾ ನಿಲ್ದಾಣವನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ರಿಕ್ಷಾ ಚಾಲಕರು ಸಮಾಜದಲ್ಲಿ ಬಹುಬೇಡಿಕೆಯ ಸೇವಕರಾಗಿದ್ದಾರೆ.ಶಿರೂರು ಕೆಳಪೇಟೆ ರಿಕ್ಷಾ ಚಾಲಕರಿಗೆ ಸೂಕ್ತ ನಿಲ್ದಾಣದ ಬೇಡಿಕೆಯಿರುವ ಕಾರಣ ಅನುದಾನ ಒದಗಿಸಲಾಗಿದೆ.ಸಾರ್ವಜನಿಕರಿಗೆ ಇದರ ಉಪಯೋಗವಾಗಲಿ ಎಂದರು.
ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಹಾಗೂ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು.
ಜಿ.ಪಂ ಮಾಜಿ ಸದಸ್ಯರಾದ ಸುರೇಶ್ ಬಟ್ವಾಡಿ,ಮೌಲಾನ್ ದಸ್ತಗೀರ್,ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ ಮೈದಿನಪುರ,ಸುರೇಂದ್ರ ದೇವಾಡಿಗ,ದಿನೇಶ್ ಕುಮಾರ್, ಉಪಾಧ್ಯಕ್ಷ ಆಶ್ರಫ್ ಹಾಜರಿದ್ದರು.
ಶಿರೂರು ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಶಿವರಾಜ್ ಪೂಜಾರಿ ಕರಾವಳಿ ಸ್ವಾಗತಿಸಿದರು.ಕೋಟಿ ಪೂಜಾರಿ ಪೇಟೆ ವಂದಿಸಿದರು.
News/Giri shiruru