ಶಿರೂರು; ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ಇದರ ಬೈಂದೂರು ಪ್ರಖಂಡ ಶಿರೂರು ನಗರದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಬ್ರಹತ್ ಪಂಜಿನ ಮೆರವಣಿಗೆ ಶಿರೂರಿನಲ್ಲಿ ನಡೆಯಿತು.ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹತ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಜರಂಗದಳ ದಕ್ಷಿಣ ಪ್ರಾಂತ್ಯದ ಸಂಚಾಲಕ ಸುನೀಲ್ ಕೆ.ಆರ್ ಈ ದೇಶದ ಸಂಸ್ಕ್ರತಿ,ಸಾಂಸ್ಕ್ರತಿಕ ಪರಂಪರೆಯನ್ನು ಹಿಂದೂ ಸಮಾಜ ನಿರಂತರ,ತ್ಯಾಗ,ಬಲಿದಾನದ ಮೂಲಕ ರಕ್ಷಿಸಿಕೊಂಡು ಬಂದಿದೆ.ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಖಂಡನೀಯವಾಗಿದೆ.ಸಹಿಷ್ಣತೆಯನ್ನು ಪಾಲಿಸಿಕೊಂಡು ಬಂದ ಹಿಂದೂ ಸಮಾಜದ ತಾಳ್ಮೆ ಮತ್ತು ಸಹನೆ ಮೀರಿದಾಗ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಹಿಂದೂರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ವಿ.ಹಿ.ಪ ಬಜರಂಗದಳ ಜಿಲ್ಲಾ ಸಹ ಕಾರ್ಯದರ್ಶಿ ಸುಧೀರ್ ನಿಟ್ಟೆ,ವಿ.ಹಿ.ಪ ಬಜರಂಗದಳ ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ,ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಜಯಾನಂದ ಹೋಬಳಿದಾರ್,ಸತೀಶ ಪ್ರಭು,ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಗ್ರಾ.ಪಂ ಸದಸ್ಯ ಬಾಬು ಮೊಗೇರ್ ಅಳ್ವೆಗದ್ದೆ,ಸುರೇಂದ್ರ ದೇವಾಡಿಗ,ತುಳಸಿದಾಸ್ ಮೊಗೇರ್ ಹಾಗೂ ಹಿಂದೂ ಕಾರ್ಯಕರ್ತರು ಹಾಜರಿದ್ದರು.ಬಳಿಕ ಶಿರೂರು ಪೇಟೆಯಿಂದ ಮಾರ್ಕೆಟ್ ತನಕ ಪಂಜಿನ ಮೆರಣಿಗೆ ನಡೆಸಲಾಯಿತು.

ವಿ.ಹಿ.ಪಬಜರಂಗದಳ ದೂರು ತಾಲೂಕು ಘಟಕದ ಅಧ್ಯಕ್ಷ ಜಗದೀಶ ಕೊಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿ.ಹಿ.ಪ ಬಜರಂಗದಳ ತಾಲೂಕು ಸಂಯೋಜಕ ಸುಧಾಕರ ಶೆಟ್ಟಿ ನೆಲ್ಯಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ದೀಪಕ್ ಕುಮಾರ್ ಶೆಟ್ಟಿ ಕರಾವಳಿ ವಂದಿಸಿದರು.

News/Giri shiruru

 

Leave a Reply

Your email address will not be published.

five + 16 =