ಶಿರೂರು: ಶಿರೂರಿನಲ್ಲಿ ನೆರೆ ಹಾವಳಿಯಿಂದ ಅರವತ್ತಕ್ಕೂ ಅಧಿಕ ದೋಣಿಗಳು ಹಾನಿಗೊಳಗಾದ ಪ್ರದೇಶಕ್ಕೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವಿವಾರ ಬೇಟಿ ನೀಡಿದರು.ಮಳೆಯಿಂದ ಹಾನಿಗೊಳಗಾದ ದೋಣಿಗಳನ್ನು ವೀಕ್ಷಿಸಿದ ಅವರು ಮೀನುಗಾರರೊಂದಿಗೆ ಮಾತನಾಡಿ ನೆರೆ ಪರಿಹಾರದಲ್ಲಿ ಮೀನುಗಾರರ ದೋಣಿಗಳಿಗೆ ಹಾನಿಗೊಳಗಾದ ಕುರಿತು ಅತ್ಯಧಿಕ ಅನುದಾನ ನೀಡಲು ಅವಕಾಶಗಳಿರುವುದಿಲ್ಲ.ಹೀಗಾಗಿ ಪ್ರಾಕೃತಿಕ ವಿಕೋಪ ಸೇರಿದಂತೆ ಇತರ ವ್ಯವಸ್ಥೆ ಮೂಲಕ ಗರಿಷ್ಟ ಅನುದಾನ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ.ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ವಾಸ್ತವತೆಯನ್ನು ತಿಳಿಸಿ ಗರಿಷ್ಟ ಅನುದಾನ ಒದಗಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಉಪತಹಶೀಲ್ದಾರ ಭೀಮಪ್ಪ ಎಚ್.ಬಿಲ್ಲಾರ್,ಮೀನುಗಾರ ಮುಖಂಡ ಜಗನ್ನಾಥ ಮೊಗವೀರ,ಉಪ್ಪುಂದ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುತ್ತಯ್ಯ ಖಾರ್ವಿ,ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ,ನಾಗರಾಜ ಖಾರ್ವಿ ಬಿ.ಎಚ್.ಪಿ,ಕುಮಾರ್ ಖಾರ್ವಿ,ಉಪ್ಪುಂದ ಗ್ರಾ.ಪಂ ಸದಸ್ಯ ನಾಗರಾಜ ಖಾರ್ವಿ,ಶಿರೂರು ಗ್ರಾ.ಪಂ ಸದಸ್ಯ ಬಾಬು ಮೊಗೇರ್ ಅಳ್ವೆಗದ್ದೆ,ಸದಾಶಿವ ಡಿ.ಪಡುವರಿ,ತುಳಸಿದಾಸ್ ಮೊಗೇರ್ ಹಾಜರಿದ್ದರು.
ಜಯಪ್ರಕಾಶ ಹೆಗ್ಡೆ ಕಳಿಹಿತ್ಲುವಿಗೆ ಬೇಟಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಇತ್ತೀಚೆಗೆ ಮಳೆಯಿಂದ ದೋಣಿಗಳು ಸಮುದ್ರಪಾಲಾದ ಶಿರೂರು ಕಳಿಹಿತ್ಲು ಪ್ರದೇಶಕ್ಕೆ ರವಿವಾರ ಬೇಟಿ ನೀಡಿದರು.ಬಳಿಕ ಮಳೆಯಿಂದ ಹಾನಿಗೊಳಗಾದ ಮೀನುಗಾರಿಕಾ ದೋಣಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ,ಮೀನುಗಾರಿಕಾ ನಿರ್ದೇಶಕ ಶಿವಕುಮಾರ್,ಮೀನುಗಾರಿಕಾ ಸಹಾಯಕ ನಿರ್ದೇಶಕಿ ಸುಮಲತಾ,ಗಣೇಶ, ಜಿ.ಪಂ ಮಾಜಿ ಸದಸ್ಯರಾದ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಉಪತಹಶೀಲ್ದಾರ ಭೀಮಪ್ಪ ಎಚ್.ಬಿಲ್ಲಾರ್,ಮೀನುಗಾರ ಮುಖಂಡ ಜಗನ್ನಾಥ ಮೊಗವೀರ,ಉಪ್ಪುಂದ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುತ್ತಯ್ಯ ಖಾರ್ವಿ,ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ,ನಾಗರಾಜ ಖಾರ್ವಿ ಬಿ.ಎಚ್.ಪಿ,ಕುಮಾರ್ ಖಾರ್ವಿ,ಉಪ್ಪುಂದ ಗ್ರಾ.ಪಂ ಸದಸ್ಯ ನಾಗರಾಜ ಖಾರ್ವಿ,ಶಿರೂರು ಗ್ರಾ.ಪಂ ಸದಸ್ಯ ಬಾಬು ಮೊಗೇರ್ ಅಳ್ವೆಗದ್ದೆ,ಸದಾಶಿವ ಡಿ.ಪಡುವರಿ,ತುಳಸಿದಾಸ್ ಮೊಗೇರ್,ಕಂದಾಯ ನಿರೀಕ್ಷಕ ಮಂಜು ಮೊದಲಾದವರು ಹಾಜರಿದ್ದರು.
News/Giri shiruru