ಬೈಂದೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನೊಳಗೊಂಡ ಜೆಸಿಐ ಭಾರತದ ವಲಯ 15 ರ 2026 ನೇ ಸಾಲಿನ ಜೆಸಿಐ ರಾಷ್ಟ್ರೀಯ ಕಾರ್ಯಕ್ರಮದ ವಲಯ ನಿರ್ದೇಶಕರಾಗಿ ಜೆ.ಎಫ್.ಪಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆಗೊಂಡರು.
2023ನೇ ಸಾಲಿನ ಘಟಕ ಅಧ್ಯಕ್ಷರಾಗಿ 130ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿ ವಲಯದಲ್ಲಿ ಅತೀ ಹೆಚ್ಚು ಮನ್ನಣೆಗಳನ್ನು ಗಳಿಸಿ ಜೆಸಿಐ ಉಪ್ಪುಂದ ಘಟಕದ ಹೆಸರಿಗೆ ಕೀರ್ತಿ ತಂದಿದ್ದು ಇವರ ನಾಯಕತ್ವ ಗುಣಗಳನ್ನು ಪರಿಗಣಿಸಿ 2ನೇ ಅವಧಿಗೆ ಜೇಸಿ ವಲಯ 15ರ ವಲಯ ಆಡಳಿತ ಮಂಡಳಿ ನೇಮಕಗೊಂಡಿದ್ದಾರೆ.ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.