ಬೈಂದೂರು: ರೋಟರಿ ಕ್ಲಬ್ ಬಂದೂರು ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶಿರೂರು ಆಯ್ಕೆಯಾದರು.ಇವರು ಜೆಸಿಐ ಮಾಜಿ ಅಧ್ಯಕ್ಷರಾಗಿ,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷರಾಗಿ,ರೈತ ಪರ ಹೋರಾಟಗಾರರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಶುಕ್ರವಾರ ಸಂಜೆ ಶಿರೂರಿನಲ್ಲಿ ನಡೆದ ರೋಟರಿ ಕುಟುಂಬ ಸಮ್ಮೀಲನ ಕಾರ್ಯಕ್ರಮದಲ್ಲಿ ನೂತನ ಸಾಲಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.