ಶಿರೂರು: ಹಿಂದೂ ಸಂಗಮ ಆಯೋಜನಾ ಸಮಿತಿ ಬೈಂದೂರು ತಾಲೂಕು ಶಿರೂರು ಮಂಡಲ ಇದರ ವತಿಯಿಂದ ಫೆ.1 ರಂದು ಶಿರೂರಿನಲ್ಲಿ ನಡೆಯಲಿರುವ ಹಿಂದೂ ಸಂಗಮ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶಿರೂರು ಪೇಟೆ ಶ್ರೀ ಜೈನ ಶೇಡಿಬೀರ ದೈವಸ್ಥಾನದ ಆವರಣದಲ್ಲಿ ನಡೆಯಿತು.
ಶಿರೂರಿನ ಹಿರಿಯ ವೈದ್ಯರಾದ ಡಾ.ಕೆ.ಪಿ ನಂಬಿಯಾರ್ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಮುಖಂಡರಾದ ತುಳಸಿದಾಸ್ ಮೊಗೇರ್,ಹಿರಿಯರಾದ ಎಸ್.ಪ್ರಕಾಶ ಪ್ರಭು,ದಾಸನಾಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಯ್ಯ ಶೆಟ್ಟಿ,ಗ್ರಾ.ಪಂ ಸದಸ್ಯ ಬಾಬು ಮೊಗೇರ್,ಹಿರಿಯ ನಾಗರೀಕ ವೇದಿಕೆಯ ಚಂದ್ರಶೇಖರ ಶೆಟ್ಟಿ,ನಾಗರಾಜ ಪ್ರಭು,ದಿನೇಶ ಕುಮಾರ್,ಗಿರೀಶ್ ಮೇಸ್ತ ,ರಾಘವೇಂದ್ರ ಪ್ರಭು,ದಿನೇಶ ಬಪ್ಪನಬೈಲು ಮೊದಲಾದವರು ಹಾಜರಿದ್ದರು.

