ಬೈಂದೂರು: ಜೆಸಿಐ ಉಪ್ಪುಂದ ಇದರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಮಾತೃಶ್ರೀ ಸಭಾಭವನ ಶಾಲೆಬಾಗಿಲುವಿನಲ್ಲಿ ನಡೆಯಿತು.

ಜೆಸಿಐ ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು ಬದುಕಿನಲ್ಲಿ ಅವಕಾಶ ದೊರೆಯುವುದು ವಿರಳ.ಆದರೆ ದೊರೆತ  ಅವಕಾಶಗಳನ್ನು ಸಾರ್ಥಕ ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ಯುವಜನತೆಯ ಜವಬ್ದಾರಿಯಾಗಿದೆ. ಈ ನೆಲೆಯಲ್ಲಿ ಜೇಸಿ ಸಂಸ್ಥೆ ಯುವ ಸಮುದಾಯದ ಸಂಘಟನಾ ಪ್ರಯತ್ನ ಶ್ಲಾಘನೀಯ.ಸಮಾಜಮುಖಿ ಚಿಂತನೆಯೊಂದಿಗೆ ಹುಟ್ಟಿಕೊಂಡ ಜೇಸಿ ಸಂಸ್ಥೆ ವ್ಯಕ್ತಿತ್ವವನ್ನು ಬೆಳೆಸುವುದರ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ರಂಜಿತ್ ಉಪ್ಪುಂದ  ಹಾಗೂ ಕಾರ್ಯದರ್ಶಿ ಪುರಂದರ್ ಉಪ್ಪುಂದ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ವಕೀಲರಾದ ವಿಶ್ವನಾಥ ಶೆಟ್ಟಿ ,ಓಕೆನ್ ಚೀಟ್ಸ್ ಮಾಲೀಕ ವೀರೇಂದ್ರ ಪೂಜಾರಿ,ವಲಯ ಉಪಾಧ್ಯಕ್ಷ ಅರುಣ್ ಮಂಜ, ಸ್ಥಾಪಕಾಧ್ಯಕ್ಷರು,ಪೂರ್ವಾಧ್ಯಕ್ಷರು, ಜೆಸಿ ಸದಸ್ಯರು,ವಲಯಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳಾದ ಜೆಜೆಸಿ ಅಧ್ಯಕ್ಷ ಅನುಲ್ ಪೂಜಾರಿ, ಲೇಡಿ ಜೆಸಿ ಅಧ್ಯಕ್ಷೆ  ರಮಣಿ,ಉಪಾಧ್ಯಕ್ಷ ಶರತ್,ಸೌಮ್ಯ, ರೇಖಾ, ಶಿವಾನಂದ ಕೆರ್ಗಾಲ್, ಜಯರಾಜ್ ನೂತನ ಅಧ್ಯಕ್ಷರಿಂದ ಪ್ರಮಾಣ ವಚನ ಪಡೆದರು.ನೂತನ ಸದಸ್ಯರಾಗಿ ಅಕ್ಷಯ್, ಕಿರಣ್, ಸುದರ್ಶನ್, ಸನತ್, ವಿನಾಯಕ ಜೆಸಿಐ ಸಂಸ್ಥೆಗೆ ಸೇರ್ಪಡೆಗೊಂಡರು.

ಘಟಕದ ಮೊದಲ ಕಾರ್ಯಕ್ರಮವಾಗಿ ಶಾಶ್ವತ ಯೋಜನೆಯಡಿಯಲ್ಲಿ ಉಪ್ಪುಂದ ಕರ್ನಾಟಕ ಪಬ್ಲಿಕ್ ಶಾಲೆಗೆ ನಾಪ್ಕೀನ್ ಬನಿಂಗ್ ಯಂತ್ರವನ್ನು ಹಸ್ತಾಂತರಿಸಲಾಯಿತು.

ಕಾರ್ಯದರ್ಶಿ ಪುರಂದರ್ ಉಪ್ಪುಂದ ವಂದಿಸಿದರು.

Leave a Reply

Your email address will not be published. Required fields are marked *

eight + fourteen =