ಶಿರೂರು; ಸಪರಿವಾರ ಶ್ರೀ ಸಂಕಮ್ಮ ಮಾಸ್ತಿ ದೈವಸ್ಥಾನ ಸಂಕದಗುಂಡಿ ಶಿರೂರು ಇದರ ವಾರ್ಷಿಕ ಹಾಲು ಹಬ್ಬ ಬುಧವಾರ ನಡೆಯಿತು. ಬೆಳಿಗ್ಗೆ ಅರ್ಚಕರ ಸಮ್ಮುಖದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ಹಾಗೂ ವಾರ್ಷಿಕ ಹಾಲು ಹಬ್ಬ ನಡೆಯಿತು.ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ಸಾವಿರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳು,ಸರ್ವ ಸದಸ್ಯರು ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.ರಾತ್ರಿ 8 ಗಂಟೆಗೆ ಯಕ್ಷ ನಕ್ಷತ್ರ ಕಿರಾಡಿ ಬಳಗದವರಿಂದ ರಾಜಾರುದ್ರಗೋಪ ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

ಚಿತ್ರ/ ಸುರೇಶ್ ಮಾಕೋಡಿ